2021ರಲ್ಲಿ ಮೊದಲ ಬಾರಿಗೆ ಅಂಡರ್-19 ಮಹಿಳಾ ವಿಶ್ವ ಕಪ್

ಮಹಿಳಾ ಕ್ರಿಕೆಟ್ ಉತ್ತೇಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 2021ರಲ್ಲಿ ಮೊದಲ ಬಾರಿಗೆ 19 ವರ್ಷದೊಳಗಿನ ಯುವತಿಯರ ವಿಶ್ವಕಪ್ ಕ್ರಿಕೆಟ್ ಆಯೋಜಿಸಿವುದಾಗಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದುಬೈ: ಮಹಿಳಾ ಕ್ರಿಕೆಟ್ ಉತ್ತೇಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 2021ರಲ್ಲಿ ಮೊದಲ ಬಾರಿಗೆ 19 ವರ್ಷದೊಳಗಿನ ಯುವತಿಯರ ವಿಶ್ವಕಪ್ ಕ್ರಿಕೆಟ್ ಆಯೋಜಿಸಿವುದಾಗಿ ತಿಳಿಸಿದೆ.

ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಮಹಿಳಾ ಅಂಡರ್-19 ವಿಶ‍್ವಕಪ್ ಕ್ರಿಕೆಟ್ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸುವುದು ಸೇರಿದಂತೆ ಹಲವು ನಿರ್ಧಾರ ಕೈಗೊಳ್ಳಲಾಗಿದೆ.

ಐಸಿಸಿ 2023ರಿಂದ ಎಂಟು ವರ್ಷಗಳ ಕ್ರಿಕೆಟ್ ಕಾರ್ಯಕ್ರಮಗಳ ಘೋಷಣೆ ಮಾಡಿದೆ. ಪ್ರತಿ ವರ್ಷ ಮಹಿಳಾ ಕ್ರಿಕೆಟ್ ನ ದೊಡ್ಡ ಟೂರ್ನಿಯನ್ನು ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ ಮಹಿಳಾ ಹಾಗೂ ಪುರುಷರ ಅಂಡರ್-19ನಲ್ಲಿ ಪ್ರಮುಖ ಟೂರ್ನಿ ಆಯೋಜಿಸಲಿದೆ.

ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಈ ಬಗ್ಗೆ ಮಾತನಾಡಿ, "ಸಭೆಯಲ್ಲಿ ಚರ್ಚಿಸಿದ ಬಳಿಕ ಪುರುಷ ಹಾಗೂ ಮಹಿಳೆಯರಿಗೆ ಮಹತ್ವದ ಟೂರ್ನಿ ಪ್ರತಿ ವರ್ಷ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಪ್ರತಿ ವರ್ಷ ಕ್ರಿಕೆಟ್ ನಡೆಯುತ್ತಲೆ ಇರುತ್ತದೆ" ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com