ಪುಲ್ವಾಮಾ ಹುತಾತ್ಮರ ಮಕ್ಕಳಿಗೆ ವೀರೇಂದ್ರ ಸೆಹ್ವಾಗ್ ತರಬೇತಿ!

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಮಕ್ಕಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತರಬೇತಿ ನೀಡಲಿದ್ದಾರೆ.
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
Updated on: 

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಮಕ್ಕಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತರಬೇತಿ ನೀಡಲಿದ್ದಾರೆ. 

ಹುತಾತ್ಮ ಯೋಧರ ಇಬ್ಬರು ಮಕ್ಕಳಿಗೆ ವೀರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮತ್ತು ಕ್ರಿಕೆಟ್ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯುತ್ತಿರುವ ಮಕ್ಕಳ ಫೋಟೋವನ್ನು ಸೆಹ್ವಾಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. 

ಟ್ವೀಟ್ ನಲ್ಲಿ ಬ್ಯಾಟ್ಸ್ ಮನ್ ಅರ್ಪಿತ್ ಸಿಂಗ್ ಪುಲ್ವಾಮಾ ಹುತಾತ್ಮ ರಾಮ್ ವಕೀಲ್ ಪುತ್ರ ಮತ್ತು ಬೌಲರ್ ರಾಹುಲ್ ಸೊರೆಂಗ್ ವಿಜಯ್ ಸೊರೆಂಗ್ ಅವರ ಪುತ್ರ. ಈ ಸಂತೋಷದಿಂದ ಹಲವು ಅಂಶಗಳನ್ನು ಸೋಲಿಸಬಹುದು ಎಂದು ಬರೆದುಕೊಂಡಿದ್ದಾರೆ.

ಸೆಹ್ವಾಗ್ ರ ಈ ಟ್ವೀಟ್ ಗೆ ಅಭಿಮಾನಿಗಳು ಸೆಲ್ಯೂಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com