ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಲಿಸಾ ಕೀಟ್ಲಿ ಮುಖ್ಯ ಕೋಚ್!

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಲಿಸಾ ಕೀಟ್ಲಿ ಅವರನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಪೂರ್ಣವಧಿ ಮುಖ್ಯ ಕೋಚ್ ನೇಮಿಸಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್‌ಸ್‌ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
ಲೀಸಾ ಕೀಟ್ಲಿ
ಲೀಸಾ ಕೀಟ್ಲಿ

ಲಂಡನ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಲಿಸಾ ಕೀಟ್ಲಿ ಅವರನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಪೂರ್ಣವಧಿ ಮುಖ್ಯ ಕೋಚ್ ನೇಮಿಸಲಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್‌ಸ್‌ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

48ರ ಪ್ರಾಯದ ಲಿಸಾ ಅವರು ಒಂಬತ್ತು ಟೆಸ್ಟ್‌ ಹಾಗೂ 85 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಾಡಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿ ಇಂಗ್ಲೆಂಡ್ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. 2011 ರಿಂದ 2015ರ ಅವಧಿಯಲ್ಲಿ ಲಿಸಾ ಕೀಟ್ಲಿ ಅವರು ಇಂಗ್ಲೆಂಡ್ ಮಹಿಳಾ ಅಕಾಡೆಮಿಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಆ ಮೂಲಕ ಅವರು 50 ಓವರ್ ಮಾದರಿಯಲ್ಲಿ ಪುರುಷರ ತಂಡದಷ್ಟೆ ಬಲಿಷ್ಟವಾಗಿ ಇಂಗ್ಲೆೆಂಡ್ ಮಹಿಳಾ ತಂಡವನ್ನು ಕಟ್ಟುವಲ್ಲಿ ಸಫಲರಾಗಿದ್ದರು.

ಲಿಸಾ ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುವ ಮಹಿಳಾ ಬಿಗ್ ಬ್ಯಾಷ್ ಲೀಗ್ ನ ಪರ್ತ್ ಸ್ಕಾರ್ಚರ್ಸ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿರುವ ಹಿನ್ನೆೆಲೆಯಲ್ಲಿ ಅವರು ಪರ್ತ್ ತಂಡದ ಕೋಚ್ ಸ್ಥಾನದಿಂದ ಮುಂದೆ ಕೆಳಗೆ ಇಳಿಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com