ತಮಿಳುನಾಡು ಪ್ರೀಮಿಯರ್ ಲೀಗ್(ಟಿಪಿಎಲ್) ಫಿಕ್ಸಿಂಗ್ ಆರೋಪ ತನಿಖೆ ಶುರು

ನಾಲ್ಕನೇ ಆವೃತ್ತಿ ತಮಿಳುನಾಡು ಪ್ರೀಮಿಯರ್ ಲೀಗ್‌ನ ಆಟಗಾರರು ಅಕ್ರಮವಾಗಿ ಬೇರೆಯವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪದ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ಘಟಕವು ತನಿಖೆಯನ್ನು ಆರಂಭಿಸಿದೆ.
ಟಿಪಿಎಲ್ ಲೀಗ್
ಟಿಪಿಎಲ್ ಲೀಗ್

ಚೆನ್ನೈ: ನಾಲ್ಕನೇ ಆವೃತ್ತಿ ತಮಿಳುನಾಡು ಪ್ರೀಮಿಯರ್ ಲೀಗ್‌ನ ಆಟಗಾರರು ಅಕ್ರಮವಾಗಿ ಬೇರೆಯವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪದ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ಘಟಕವು ತನಿಖೆಯನ್ನು ಆರಂಭಿಸಿದೆ.

ತಮಿಳುನಾಡು ಕ್ರಿಕೆಟ್ ಸಂಘ ಟಿ-20 ಲೀಗ್ ಆಯೋಜಿತ್ತು. ಪಂದ್ಯಾವಳಿಯ ವೇಳೆ ಹಲವು ಜನರು ಫಿಕ್ಸಿಂಗ್‍‍ಗಾಗಿ ಅವರನ್ನು ಸಂಪರ್ಕಿಸಿದ್ದಾಗಿ ಅನೇಕ ಆಟಗಾರರು ದೂರಿದ್ದಾರೆ. ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಈ ಆರೋಪಗಳ ಬಗ್ಗೆ ತನಿಖೆ ಆರಂಭಿಸಿದೆ. ಎಸಿಯು ಮುಖ್ಯಸ್ಥ ಅಜಿತ್ ಸಿಂಗ್ ಅವರ ಪ್ರಕಾರ, ಜುಲೈ 19 ಮತ್ತು ಆಗಸ್ಟ್ 15 ರ ನಡುವೆ ಎಂಟು ತಂಡಗಳ ನಡುವೆ ಆಡಿದ ಲೀಗ್ ಪಂದ್ಯಗಳಲ್ಲಿ ಆಟಗಾರರನ್ನು ಸಂಪರ್ಕಿಸಲಾಗಿದೆ. ಆಟಗಾರರನ್ನು ಸಂಪರ್ಕಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸಂಪರ್ಕ ಸಾಧಿಸಲು ಸಂದೇಶಗಳು ಬಂದಿವೆ ಎಂದು ಆಟಗಾರರು ಎಸಿಯುಗೆ ತಿಳಿಸಿದ್ದಾರೆ. ಆದ್ದರಿಂದ ಈ ತನಿಖೆ ಯಾವುದೇ ಆಟಗಾರರ ವಿರುದ್ಧವಲ್ಲ ಎಂದು ಅಜಿತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com