ಪಾಕ್ ವೇಗಿ ಹಸನ್ ಅಲಿ ಮದುವೆಯಾಗುತ್ತಿರುವ ಭಾರತೀಯ ವಧು ಇವರೆ, ಆಕೆ ಮಾಡುತ್ತಿರುವುದೇನು?

ಪಾಕ್ ಕ್ರಿಕೆಟಿಗ ಶೋಯೆಬ್​ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ದುಬೈನಲ್ಲಿ ಆಗಸ್ಟ್ 20ರಂದು ವಿವಾಹವಾಗಲಿದ್ದಾರೆ.
ಹಸನ್ ಅಲಿ, ಶಾಮಿಯಾ ಅರ್ಜೂ
ಹಸನ್ ಅಲಿ, ಶಾಮಿಯಾ ಅರ್ಜೂ
ನವದೆಹಲಿ: ಪಾಕ್ ಕ್ರಿಕೆಟಿಗ ಶೋಯೆಬ್​ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ದುಬೈನಲ್ಲಿ ಆಗಸ್ಟ್ 20ರಂದು ವಿವಾಹವಾಗಲಿದ್ದಾರೆ. 
ಪಾಕಿಸ್ತಾನದ ಬಲಗೈ ವೇಗಿ ಹಸನ್ ಅಲಿ ಭಾರತೀಯ ಮೂಲದ ಶಾಮಿಯಾ ಅರ್ಜೂ ಅವರನ್ನು ಮದುವೆಯಾಗಲಿದ್ದಾರೆ. ಅರ್ಜೂ ದೆಹಲಿಯಲ್ಲಿ ನೆಲೆಸಿದ್ದು ವಿಮಾನ ಇಂಜಿನಿಯರ್ ಆಗಿದ್ದು ಎಮಿರೇಟ್ಸ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. 
ದುಬೈ ನಲ್ಲಿ ಇಬ್ಬರ ವಿವಾಹ ನಡೆಯಲಿದೆ. 25 ವರ್ಷದ ಹಸನ್ ಅರ್ಜೂ ನಡುವೆ ವಿಶ್ವಕಪ್ ಟೂರ್ನಿ ವೇಳೆ ಪ್ರೇಮಾಂಕುರವಾಗಿತ್ತು.
ಶೋಯೆಬ್ ಮಲೀಕ್, ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಬಳಿಕ ಭಾರತೀಯ ಯುವತಿಯನ್ನು ವಿವಾಹವಾಗುತ್ತಿರುವ 4 ನೇ ಪಾಕ್ ಕ್ರಿಕೆಟಿಗ ಹಸನ್ ಅರ್ಜೂ ಆಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com