ಐಸಿಸಿ ನಿಯಮ ಉಲ್ಲಂಘನೆ: ನವದೀಪ್‌ ಸೈನಿಗೆ ಒಂದು ಡಿಮೆರಿಟ್‌ ಅಂಕ

ಶನಿವಾರ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತದ ತಂಡದ ಯುವ ವೇಗಿ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ.

Published: 05th August 2019 12:00 PM  |   Last Updated: 05th August 2019 06:12 AM   |  A+A-


Navdeep Saini

ನವದೀಪ್‌ ಸೈನಿ

Posted By : SBV SBV
Source : UNI
ಫ್ಲೋರಿಡಾ: ಶನಿವಾರ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತದ ತಂಡದ ಯುವ ವೇಗಿ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ. 

ಈ ವಿಷಯ ಐಸಿಸಿ ಹೇಳಿಕೆಯಿಂದ ತಿಳಿದುಬಂದಿದ್ದು, ಬೌಲಿಂಗ್‌ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ ಗಳ ವಿಕೆಟ್‌ ಉರುಳಿಸಿದಾಗ ಅನುಚಿತ ವರ್ತನೆ ತೋರಿದ್ದರಿಂದ ಸೈನಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಐಸಿಸಿ 2.5 ಅರ್ಟಿಕಲ್‌ ಪ್ರಕಾರ ಆಟಗಾರರು ಹಾಗೂ ಪಂದ್ಯದ ಸಹಾಯಕ ಸಿಬ್ಬಂದಿ ಮೇಲೆ ಯಾವುದೇ ಆಟಗಾರ ನಿಯಮ ಮೀರಿ ವರ್ತಿಸುವಾಗಿಲ್ಲ.

ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ನವದೀಪ್‌ ಸೈನಿ ಅವರಿಗೆ ಒಂದು ಡಿಮೆರಿಟ್‌ ಅಂಕ ನೀಡಲಾಗಿದೆ. ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಗೆಲ್‌ ಡುಗ್ವೈಡ್‌ ಮತ್ತು ಗ್ರೆಗೋರಿ ಬ್ರಾಥ್‌ವೇಟ್‌ ಜತೆಗೆ ಮೂರನೇ ಅಂಪೈರ್‌ ಲೆಸ್ಲಿ ರೇಫರ್‌ ಮತ್ತು ನಾಲ್ಕನೇ ಅಧಿಕಾರಿ ಪ್ಯಾಟ್ರಿಕ್‌ ಗಸ್ಟರ್ಡ್‌ ಅವರು ಈ ಪ್ರಕರಣದ ಬಗ್ಗೆ ಚರ್ಚಿಸಿ ಈ ನಿರ್ಧಾರ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲೇ ನವದೀಪ್‌ ಸೈನಿ ಅವರು ಅಮೋಘ ಬೌಲಿಂಗ್‌ ಮಾಡಿದ್ದರು. ನಾಲ್ಕು ಓವರ್‌ಗಳಲ್ಲಿ ಒಂದು ಮೆಡಿನ್‌ನೊಂದಿಗೆ 17 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 

ಒಬ್ಬ ಆಟಗಾರರ 24 ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಡಿಮೆರಿಟ್‌ ಅಂಕಗಳನ್ನು ಪಡೆದರೆ ಅವರ ಮೇಲೆ ನಿಷೇಧ ಹೇರಬಹುದು. ಎರಡು ಅಮಾನತು ಅಂಕಗಳು ಪಡೆದರೆ, ಆ ಆಟಗಾರ ಒಂದು ಟೆಸ್ಟ್, ಎರಡು ಏಕದಿನ ಪಂದ್ಯ ಅಥವಾ ಎರಡು ಟಿ-20 ಪಂದ್ಯಗಳಿಂದ ನಿಷೇದ ಹೇರಲಾಗುವುದು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp