ವೆಸ್ಟ್ ಇಂಡೀಸ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ 59 ರನ್ ಗಳ ಭರ್ಜರಿ ಜಯ!

ವೆಸ್ಟ್ ಇಂಡೀಸ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ 59 ರನ್ ಗಳ ಭರ್ಜರಿ ಜಯಗಳಿಸಿದೆ. 

Published: 12th August 2019 03:35 PM  |   Last Updated: 12th August 2019 07:51 PM   |  A+A-


Posted By : Srinivas Rao BV

ವೆಸ್ಟ್ ಇಂಡೀಸ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತ 59 ರನ್ ಗಳ ಭರ್ಜರಿ ಜಯಗಳಿಸಿದೆ. 

ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ 280 ರನ್ ಗಳ ಗುರಿ ನೀಡಿತ್ತು. ಪಂದ್ಯಕ್ಕೆ ಮಳೆ ಅಡ್ಡಿ ಆದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯ ವೆಸ್ಟ್ ಇಂಡೀಸ್ ತಂಡಕ್ಕೆ 46 ಓವರ್ ಗಳಲ್ಲಿ 270 ರನ್ ಗಳ ಗುರಿ ನೀಡಲಾಯಿತು. 

270 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಕ್ರಿಸ್ ಗೇಲ್ ಹಾಗೂ ಎವಿನ್ ಲೂಯಿಸ್ 45 ರನ್ ಗಳ ಜೊತೆಯಾಟ ಆಡಿದರು. 10 ನೇ ಓವರ್ ನಲ್ಲಿ ಕ್ರಿಸ್ ಗೇಲ್ ಭುವನೇಶ್ವರ್ ಕಿಮಾರ್ ಗೆ ವಿಕೆಟ್ ಒಪ್ಪಿಸಿ ಕ್ರೀಸ್ ನಿಂದ ಹೊರ ನಡೆದರು.

18.4 ಓವರ್ ವೇಳೆಗೆ ವೆಸ್ಟ್ ಇಂಡೀಸ್ 122 ರನ್ ಗಳನ್ನು ಗಳಿಸಬೇಕಿದ್ದರೆ ಭಾರತಕ್ಕೆ ಪಂದ್ಯ ಗೆಲ್ಲಲು 6 ವಿಕೆಟ್ ಗಳ ಅಗತ್ಯವಿತ್ತು. ಈ ಹಂತದಲ್ಲಿ ರೋಸ್ಟನ್ ಚೇಸ್ ಹಾಗೂ ಪೂರನ್‌ ಜೊತೆಯಾಟದಿಂದ ತಂಡಕ್ಕೆ 31 ರನ್ ಗಳ ಆಶಾದಾಯಕ ಜೊತೆಯಾಟ ದೊರೆಯಿತು. ಆದರೆ 35 ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಪೂರನ್‌ ಅವರನ್ನು ಪೆವಿಲಿಯನ್ ಗೆ ಕಳಿಸಿ ವೆಸ್ಟ್ ಇಂಡೀಸ್ ತಂಡ ಸಂಕಷ್ಟ ಎದುರಿಸುವಂತೆ ಮಾಡಿದರು ಅಂತಿಮವಾಗಿ ವೆಸ್ಟ್ ಇಂಡೀಸ್ ಭಾರತದೆದುರು 59 ರನ್ ಗಳ ಸೋಲು ಕಂಡಿತು.  

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp