ತಗ್ಗಿದ ಬಿಸಿಸಿಐ: 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್…?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪ್ರತಿಷ್ಠಿತ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಪರಿಚಯಿಸುವ ಅಭಿಯಾನ ಪ್ರಾರಂಭಿಸಿದೆ. ಐಸಿಸಿ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪರಿಚಯಿಸುವ ಬಗ್ಗೆ ಚರ್ಚಿಸಿದೆ.
ಒಲಿಂಪಿಕ್ಸ್-ಕ್ರಿಕೆಟ್
ಒಲಿಂಪಿಕ್ಸ್-ಕ್ರಿಕೆಟ್

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪ್ರತಿಷ್ಠಿತ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಪರಿಚಯಿಸುವ ಅಭಿಯಾನ ಪ್ರಾರಂಭಿಸಿದೆ. ಐಸಿಸಿ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪರಿಚಯಿಸುವ ಬಗ್ಗೆ ಚರ್ಚಿಸಿದೆ.

ಮೆರಿಲ್‌ಬೋನ್ ಕ್ರಿಕೆಟ್ ಸಮಿತಿ (ಎಂಸಿಸಿ) ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಎಂದು ಎಂಸಿಸಿ ಅಧ್ಯಕ್ಷ ಮೈಕ್ ಗೇಟಿಂಗ್ ತಿಳಿಸಿದ್ದಾರೆ. 2028ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿಶ್ವದ ಕ್ರೀಡಾ ಪ್ರೇಮಿಗಳು  ಕ್ರಿಕೆಟ್ ಕ್ರೀಡೆಯನ್ನು ವೀಕ್ಷಿಸುವ ಸಾಧ್ಯತೆಯಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನೆ ಅವರೊಂದಿಗೂ ಈ ಬಗ್ಗೆ ಮಾತನಾಡಿರುವುದಾಗಿ, ಮುಂದಿನ 18 ತಿಂಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಮೂಡಲಿದೆ. ಒಲಿಂಪಿಕ್ಸ್‌ ನಲ್ಲಿ ಅರ್ಹತೆ ಪಡೆಯುವುದು ಹೇಗೆ ಎಂಬುದರ ಬಗ್ಗೆ ಈಗ ಹೆಚ್ಚು ಗಮನ ಹರಿಸಲಾಗಿದೆ ಎಂದು ಗೇಟಿಂಗ್ ಹೇಳಿದರು. 

ಇತ್ತೀಚೆಗೆ, ಬಿಸಿಸಿಐ, ರಾಷ್ಟ್ರೀಯ  ಉದ್ದೀಪನ ಮದ್ದು ತಡೆ ಘಟಕ (ನಾಡಾ) ವ್ಯಾಪ್ತಿಗೆ ಬಂದಿದೆ. ಒಲಿಂಪಿಕ್ಸ್ ನಿಯಮಾವಳಿಗಳ ಪ್ರಕಾರ, ಎಲ್ಲಾ ಕ್ರೀಡಾ ಫೆಡರೇಷನ್‌ಗಳನ್ನು ನಾಡಾ ವ್ಯಾಪ್ತಿಗೆ ಒಳಪಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com