ಟೀಂ ಇಂಡಿಯಾ ಕೋಚ್ ಹುದ್ದೆಗೆ ಆರು ಅಭ್ಯರ್ಥಿಗಳ ಕಿರುಪಟ್ಟಿ  ಬಿಡುಗಡೆ!

ಹಾಲಿ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರೀ ಸೇರಿದಂತೆ ಆರು ಅಭ್ಯರ್ಥಿಗಳನ್ನೊಳಗೊಂಡ ಕಿರುಪಟ್ಟಿ ಬಿಡುಗಡೆಯಾಗಿದೆ. 
ಟೀಂ ಇಂಡಿಯಾ ಕೋಚ್ ಹುದ್ದೆಗೆ ಆರು ಅಭ್ಯರ್ಥಿಗಳ ಕಿರುಪಟ್ಟಿ  ಬಿಡುಗಡೆ!

ನವದೆಹಲಿ: ಹಾಲಿ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರೀ ಸೇರಿದಂತೆ ಆರು ಅಭ್ಯರ್ಥಿಗಳನ್ನೊಳಗೊಂಡ ಕಿರುಪಟ್ಟಿ ಬಿಡುಗಡೆಯಾಗಿದೆ. 

ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲೌ ರೌಂಡರ್ ಮತ್ತು ಶ್ರೀಲಂಕಾ ಕೋಚ್ ಟಾಮಿ ಮೊಡಿ, ವೆಸ್ಟ್ ಇಂಡೀಸ್ ಮಾಜಿ ಆಲ್ ರೌಂಡರ್ ಮತ್ತು ಅಫ್ಘಾನಿಸ್ತಾನ ಕೋಚ್ ಫಿಲ್ ಸೈಮನ್ಸ್,  ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ ಚಂದ್ ರಜಪುತ್, ಮಾಜಿ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ಮತ್ತು ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಈ ಪಟ್ಟಿಯಲ್ಲಿದ್ದಾರೆ.

ಲೆಜೆಂಡರ್ ಕಪೀಲ್ ದೇವ್ ನೇತೃತ್ವದಲ್ಲಿ ಕ್ರಿಕೆಟ್ ಸಲಹಾತ್ಮಕ ಸಮಿತಿ ಈ ವಾರದೊಳಗೆ ಅಥವಾ ಮುಂದಿನ ವಾರದ ಆರಂಭದಲ್ಲಿ ಈ ಪಟ್ಟಿಯಲ್ಲಿರುವ ಒಬ್ಬರಿಗೆ ಭಾರಿ ಗಿಫ್ಟ್ ನೀಡಲಿದೆ. 

ಭಾರತದ ಮೊದಲ ವಿಶ್ವಕಪ್ ಗೆದ್ದ ತಂಡದ ನಾಯಕ  ಕಪೀಲ್ ದೇವ್ ಹೊರತುಪಡಿಸಿದಂತೆ ಅಂಶುಮನ್ ಗಾಯಕ್ ವಾಡ್ ಹಾಗೂ ಮಾಜಿ ಮಹಿಳಾ ಕ್ರಿಕೆಟ್ ನಾಯಕಿ ಶಾಂತ ರಂಗಸ್ವಾಮಿ  ಕ್ರಿಕೆಟ್ ಸಲಹಾತ್ಮಕ ಸಮಿತಿಯಲ್ಲಿದ್ದಾರೆ. 

ಕ್ರಿಕೆಟ್ ಸಲಹಾತ್ಮಕ ಸಮಿತಿ ಮುಂದಿನ ಸಂದರ್ಶನಕ್ಕಾಗಿ ಈ ಆರು ಮಂದಿಯನ್ನೊಳಗೊಂಡ ಕಿರುಪಟ್ಟಿ ರಚಿಸಲಾಗಿದೆ. ಇವರು ಸಂದರ್ಶಕರ ಮುಂದೆ ಹಾಜರಾಗಬೇಕಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ನಲ್ಲಿ ಸೋಲಿನ ಬಳಿಕವೂ ರವಿಶಾಸ್ತ್ರೀ ಅವರೇ ಕೋಚ್ ಆಗಿ ಮುಂದುವರೆಯಬೇಕೆಂದು  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಅಪೇಕ್ಷೆಯಾಗಿದ್ದು, ಬಹುತೇಕವಾಗಿ ಅವರೇ ಮುಂದುವರೆಯುವ ಸಾಧ್ಯತೆಯೂ ಇದೆ. 

ಹಾಲಿ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರನ್ನೊಳಗೊಂಡ ಸಲಹಾತ್ಮಕ ಸಿಬ್ಬಂದಿ ಗುತ್ತಿಗೆ ಅವಧಿಯನ್ನು ವಿಶ್ವಕಪ್ ನಂತರ 45 ದಿನಗಳ ಕಾಲ ವಿಸ್ತರಿಸಲಾಗಿದ್ದು, ಮುಂದಿನ ತಿಂಗಳು ಅವಧಿ ಅಂತ್ಯಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com