'ಪಾಕಿಸ್ತಾನದಲ್ಲಿ ಬದುಕಲು ನಡುಕ ಹುಟ್ಟಿಸುತ್ತಿತ್ತು': ಮಾಜಿ ಪಾಕ್ ಕೋಚ್ ಫ್ಲವರ್‌ ಬಿಚ್ಚಿಟ್ಟ ಭಯಾನಕ ಸತ್ಯ!

ಪಾಕಿಸ್ತಾನ ದೇಶದಲ್ಲಿನ ಬದುಕು ಮತ್ತು ಪಾಕ್ ಕ್ರಿಕೆಟ್ ಮಂಡಳಿಯಲ್ಲಿನ ಸುಮಾರು ಐದು ವರ್ಷಗಳ ಕಾಲ ಕಳೆದ ಅನುಭವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್ ಬಾಯ್ಬಿಟ್ಟಿದ್ದಾರೆ.
ಗ್ರ್ಯಾಂಟ್ ಫ್ಲವರ್
ಗ್ರ್ಯಾಂಟ್ ಫ್ಲವರ್

ಇಸ್ಲಾಮಾಬಾದ್: ಪಾಕಿಸ್ತಾನ ದೇಶದಲ್ಲಿನ ಬದುಕು ಮತ್ತು ಪಾಕ್ ಕ್ರಿಕೆಟ್ ಮಂಡಳಿಯಲ್ಲಿನ ಸುಮಾರು ಐದು ವರ್ಷಗಳ ಕಾಲ ಕಳೆದ ಅನುಭವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್ ಬಾಯ್ಬಿಟ್ಟಿದ್ದಾರೆ. 

ಪಿಸಿಬಿಯು ಫ್ಲವರ್ ಜೊತೆಗಿನ ಒಪ್ಪಂದ ಮುಂದುವರಿಸದಿರಲು ನಿರ್ಧರಿಸಿದ ಬಳಿಕ ಫ್ಲವರ್ ಪಾಕ್‌ ಬಗ್ಗೆ ಮೊದಲ ಬಾರಿ ತುಟಿ ಬಿಚ್ಚಿದ್ದು, ಸ್ನೇಹಿ ಜನರು ಪಾಕಿಸ್ತಾನ ದೇಶದಲ್ಲಿರುವುದು ಒಳ್ಳೆಯ ವಿಚಾರ. ಹಾಗೇ ಸ್ವಾತಂತ್ರ್ಯದ ಕೊರತೆ ಮತ್ತು ಭದ್ರತೆ ವಿಚಾರ ಪಾಕಿಸ್ತಾನದಲ್ಲಿ ಬದುಕುವ ನಿಟ್ಟಿನಲ್ಲಿ ಇರುವ ತುಂಬಾನೇ ನಿರಾಶಾದಾಯಕವಾದ ಸಂಗತಿ ಎಂದು ಹೇಳಿದರು. 

2014ರಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಫ್ಲವರ್ ಅವರೊಂದಿಗಿನ ಒಪ್ಪಂದವನ್ನು ನವೀಕರಿಸುವ ಜತೆಗೆ ಇಡೀ ಕೋಚಿಂಗ್ ವಿಭಾಗ ಮತ್ತು ಬೆಂಬಲ ಸಿಬ್ಬಂದಿ ವರ್ಗವನ್ನು ಬದಲಾಯಿಸಲು ಪಿಸಿಬಿ ಬಯಸಿದೆ. 2019ರ ವಿಶ್ವಕಪ್‌ನಲ್ಲಿ ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಕಾರಣಕ್ಕೆ ಪಿಸಿಬಿ ಈ  ನಿರ್ಧಾರ ತೆಗೆದುಕೊಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com