ನಾಲ್ಕನೇ ಟೆಸ್ಟ್: ಮಾಯಾಂಕ್ , ಪೂಜಾರ ಉತ್ತಮ ಬ್ಯಾಟಿಂಗ್ ಭೋಜನ ವಿರಾಮಕ್ಕೆ ಭಾರತ 69/1

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಪ್ರಾರಂಭವಾಗಿದ್ದು ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ನಾಲ್ಕನೇ ಟೆಸ್ಟ್: ಮಾಯಾಂಕ್ , ಪೂಜಾರ ಉತ್ತಮ ಬ್ಯಾಟಿಂಗ್ ಭೋಜನ ವಿರಾಮಕ್ಕೆ ಭಾರತ 69/1
ನಾಲ್ಕನೇ ಟೆಸ್ಟ್: ಮಾಯಾಂಕ್ , ಪೂಜಾರ ಉತ್ತಮ ಬ್ಯಾಟಿಂಗ್ ಭೋಜನ ವಿರಾಮಕ್ಕೆ ಭಾರತ 69/1
ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಪ್ರಾರಂಭವಾಗಿದ್ದು ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. 
ಮಯಾಂಕ್ ಹಾಗೂ ಚೇತೇಶ್ವರ ಪೂಜಾರ ಉತ್ತಮ ಪ್ರದರ್ಶನದ ಪರಿಣಾಮ ಭಾರತ ಊಟದ ವಿರಾಮದ ವೇಳೆ  24 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ.
ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪ್ರಾರಂಭಿಕರಾಗಿ ಆಟವನ್ನಾರಂಭಿಸಿದ್ದರೂ ರಾಹುಲ್ ಮಾತ್ರ 6 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ. ಆ ಬಳಿಕ ಪೂಜಾರ ಕ್ರೀಸಿಗಿಳಿದಿದ್ದು ಮಯಾಂಕ್ ಗೆ ಆಸರೆಯಾಗಿದ್ದಾರೆ. ಈ ಜೋಡಿ ಉತ್ತಮ ಪ್ರದರ್ಶನ ನೀಡುತ್ತಿದೆ.
ಇದೇ ವೇಳೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಗುರು ರಮಾಕಾಂತ್ ಅಚ್ರೇಕರ್‌ ನಿಧನದ ಕಾರಣ ಅವರ ಗೌರವಾರ್ಥ ಭಾರತ ಕ್ರಿಕೆಟಿಗರು ಕಪ್ಪುಯ್ ಪಟ್ಟಿ ಧರಿಸಿ ಆಟವಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com