ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿರುವ ಭಾರತಕ್ಕೆ ಮತ್ತೊಂದು ಶಾಕ್: ಬೌಲಿಂಗ್ ನಿಂದ ಅಂಬಟಿ ರಾಯುಡು ಅಮಾನತು!

ಭಾರತದ ಆಲ್ ರೌಂಡರ್ ಆಂಬಟಿ ರಾಯುಡು ಅವನ್ನು ಬೌಲಿಂಗ್ ನಿಂದ ಅಮಾನತುಗೊಳಿಸಿ ಐಸಿಸಿ ಜ.28 ರಂದು ಆದೇಶ ಹೊರಡಿಸಿದೆ.

Published: 28th January 2019 12:00 PM  |   Last Updated: 28th January 2019 04:40 AM   |  A+A-


Ambati Rayudu suspended from bowling in international cricket

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿರುವ ಭಾರತಕ್ಕೆ ಮತ್ತೊಂದು ಶಾಕ್: ಬೌಲಿಂಗ್ ನಿಂದ ಅಂಬಟಿ ರಾಯುಡು ಅಮಾನತು!

Posted By : SBV SBV
Source : The New Indian Express
ಭಾರತದ ಆಲ್ ರೌಂಡರ್ ಆಂಬಟಿ ರಾಯುಡು ಅವನ್ನು ಬೌಲಿಂಗ್ ನಿಂದ ಅಮಾನತುಗೊಳಿಸಿ ಐಸಿಸಿ ಜ.28 ರಂದು ಆದೇಶ ಹೊರಡಿಸಿದೆ. 

ಜ.13 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಶೈಲಿಯ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ರಾಯುಡು ಬೌಲಿಂಗ್ ಶೈಲಿಯ ಬಗ್ಗೆ ಐಸಿಸಿ ಮ್ಯಾಚ್ ರೆಫರಿ ಮತ್ತು ಇತರೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ಮುಂದಿನ 14 ದಿನಗಳೊಳಗೆ ಪರೀಕ್ಷೆಗೆ ಒಳಗಾಗಬೇಕೆಂದು ಸೂಚಿಸಿದ್ದರು. ಆದರೆ ಪರೀಕ್ಷೆಗೆ ಒಳಪಡದ ಕಾರಣದಿಂದಾಗಿ ರಾಯುಡುಗೆ ಬೌಲಿಂಗ್ ನಿಂದ ಅಮಾನತುಮಾಡಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಅಂಬಟಿ ರಾಯುಡು ಪರೀಕ್ಷೆಗೆ ಒಳಪಡುವವರೆಗೂ ಅಮಾನತು ಆದೇಶ ಮುಂದುವರೆಯಲಿದೆ ಎಂದು ಐಸಿಸಿ ಹೇಳಿದೆ. ಈಗಾಗಲೇ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರಾಯುಡು ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹಾಯಿಸಿದ್ದಾರೆ. ಅಲ್ಲದೆ ಇದುವರೆಗೆ 46 ಏಕದಿನ ಹಾಗೂ ಆರು ಟ್ವೆಂಟಿ-20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಮುಂಬರುವ ವಿಶ್ವಕಪ್ ಹಿನ್ನಲೆಯಲ್ಲಿ ನಂ.4 ಸ್ಥಾನಕ್ಕೆ ರಾಯುಡು ಸೂಕ್ತ ಆಯ್ಕೆ ಎಂದು ನಾಯಕ ವಿರಾಟ್ ಕೊಹ್ಲಿ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp