ವಿಶ್ವಕಪ್ ಫೈನಲ್ ದಿನ ನನ್ನ ಕ್ರಿಕೆಟ್‌ ಜೀವನದ ಪಾಲಿಗೆ ಉತ್ತಮ-ಕೆಟ್ಟ ದಿನ: ಮಾರ್ಟಿನ್ ಗುಪ್ಟಿಲ್‌

ಐಸಿಸಿ ವಿಶ್ವಕಪ್‌ ಫೈನಲ್‌ ಪಂದ್ಯದ ಸೋಲಿನ ಒಂದು ವಾರದ ಬಳಿಕ ಪ್ರತಿಕ್ರಿಯಿಸಿರುವ ನ್ಯೂಜಿಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜುಲೈ 14 ರಂದು ಕ್ರಿಕೆಟ್‌ ಜೀವನದ ಅತ್ಯುತ್ತಮ ಹಾಗೂ ಕೆಟ್ಟ ದಿನ ಎಂದು...
ಮಾರ್ಟಿನ್ ಗುಪ್ಟಿಲ್
ಮಾರ್ಟಿನ್ ಗುಪ್ಟಿಲ್
ನವದೆಹಲಿ: ಐಸಿಸಿ ವಿಶ್ವಕಪ್‌ ಫೈನಲ್‌ ಪಂದ್ಯದ ಸೋಲಿನ ಒಂದು ವಾರದ ಬಳಿಕ ಪ್ರತಿಕ್ರಿಯಿಸಿರುವ ನ್ಯೂಜಿಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜುಲೈ 14 ರಂದು ಕ್ರಿಕೆಟ್‌ ಜೀವನದ ಅತ್ಯುತ್ತಮ ಹಾಗೂ ಕೆಟ್ಟ ದಿನ ಎಂದು ಹೇಳಿದ್ದಾರೆ. 
ದಿ ಲಾರ್ಡ್ಸ್ ಅಂಗಳದಲ್ಲಿ ಒಂದು ವಾರದ ಹಿಂದೆ ನಡೆದಿದ್ದ ಫೈನಲ್‌ ಪಂದ್ಯವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಫೈನಲ್‌ ಪಂದ್ಯದ ನಡೆದ ದಿನ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಅತ್ಯುತ್ತಮ ಹಾಗೂ ಕೆಟ್ಟ ದಿನ ಎಂದು ಅನಿಸುತ್ತಿದೆ. ಇದು ವಿವಿಧ ರೀತಿ ಭಾವನೆಗಳನ್ನು ಹುಟ್ಟು ಹಾಕುತ್ತಿದೆ. 
ಇದಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್‌ ಪ್ರತಿನಿಧಿಸಿದ್ದು ಹಾಗೂ ಸಹ ಆಟಗಾರರ ಜತೆ ಇದ್ದಿದ್ದು ಹೆಮ್ಮೆ ತಂದಿದೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಗುಪ್ಟಿಲ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 
ಮತ್ತೊಂದು ಪೋಸ್ಟ್‌ನಲ್ಲಿ ಎಂಥ ಕಠಿಣ ಸಂದರ್ಭದಲ್ಲಿ ನನ್ನ ಜತೆಗಿದ್ದ ಕುಟುಂಬ ಸದಸ್ಯರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com