ದುಬೈ:ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆ ಚಾಲನೆ ನೀಡಿದ ಐಸಿಸಿ

ವಿಶ್ವ ಕ್ರಿಕೆಟ್‌ ಭಾಗವಾದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಸೋಮವಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅನ್ನು ಅಧಿಕೃತವಾಗಿ ಉದ್ಘಾಟಿಸಿತು.
ದುಬೈ:ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆ ಚಾಲನೆ ನೀಡಿದ ಐಸಿಸಿ
ದುಬೈ:ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆ ಚಾಲನೆ ನೀಡಿದ ಐಸಿಸಿ
ದುಬೈ: ವಿಶ್ವ ಕ್ರಿಕೆಟ್‌ ಭಾಗವಾದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಸೋಮವಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅನ್ನು ಅಧಿಕೃತವಾಗಿ ಉದ್ಘಾಟಿಸಿತು.
ಕಳೆದ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವು ವಿಶ್ವದ ಶ್ರೇಷ್ಠ ತಂಡವಾಗುವ ಹಾದಿಯಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿತ್ತು. ಅದೇ ರೀತಿ ಎರಡು ವರ್ಷಗಳ ಕಾಲ ಸುದೀರ್ಘ ಅವಧಿಯಲ್ಲಿ ನಡೆಯುವ ದ್ವಿಪಕ್ಷೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದು ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿಗೆ ಭಾಜನವಾಗಲಿದೆ. ಏಕದಿನ ಹಾಗೂ ಟಿ-20 ವಿಶ್ವಕಪ್‌ ರೀತಿಯಲ್ಲೇ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಡ ನಿಗದಿಪಡಿಸಲಾಗಿದೆ ಎಂದು ಐಸಿಸಿ ಕ್ರಿಕೆಟ್‌ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಗಿಯಾಫ್‌ ಅಲ್ಲಾರ್ಡೈಸ್‌ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಭಾರತ ತಂಡ ಟೆಸ್ಟ್‌ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ, ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ವಿಶ್ವದ ನಂ. 1 ತಂಡವಾಗಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಯಣ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.
ಆಗಸ್ಟ್‌ 1 ರಂದು ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವೆ ಆ್ಯಶಸ್‌ ಸರಣಿಯ ಮೊದಲನೇ ಪಂದ್ಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ. ವಿಶ್ವ ಟೆಸ್ಟ್‌ ಶ್ರೇಯಾಂಕದ ಅಗ್ರ ಒಂಬತ್ತು ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಚಾಂಪಿಯನ್‌ಶಿಪ್‌ಗಾಗಿ ಕಾದಾಟ ನಡೆಯಲಿದೆ.
ಸತತ ಎರಡು ವರ್ಷಗಳ ಕಾಲ ನಡೆಯುವ ಟೆಸ್ಟ್‌ ಚಾಂಪಿಯನ್‌ಶಿಪ್‌ 27 ಸರಣಿಗಳನ್ನು ಒಳಗೊಂಡಿದ್ದು, ಒಟ್ಟು 71 ಪಂದ್ಯಗಳು ನಡೆಯಲಿವೆ. ಅಗ್ರ ಎರಡು ತಂಡಗಳು 2021ರ ಜೂನ್‌ ತಿಂಗಳಲ್ಲಿ ಲಂಡನ್‌ ದಿ ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಹಣಾಹಣಿಯಲ್ಲಿ ಸೆಣಸಲಿವೆ.
ಒಂದು ತಂಡ ಮೂರು ತವರು ಹಾಗೂ ಇನ್ನು ಮೂರು ವಿದೇಶಿ ಸರಣಿಗಳಲ್ಲಿ ಆಡಲಿವೆ. ಎರಡು ಪಂದ್ಯಗಳ ಸರಣಿಗೆ 60 ಅಂಕ ನೀಡಲಾಗಿದ್ದು, ಮೂರು ಪಂದ್ಯಗಳ ಸರಣಿಯ ಪ್ರತಿಯೊಂದು ಪಂದ್ಯಕ್ಕೆ 40 ಅಂಕ ನೀಡಲಾಗುತ್ತದೆ. ಒಂದು ವೇಳೆ ಪಂದ್ಯ ಟೈ ಆದರೆ ಶೇ. 50 ಅಂಕಗಳನ್ನು ಎರಡೂ ತಂಡಗಳಿಗೆ ಹಂಚಲಾಗುತ್ತದೆ.
ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಎರಡು ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ದ್ವಿಪಕ್ಷೀಯ ಸರಣಿಯಲ್ಲಿ ಕನಿಷ್ಠ ಎರಡು ಅಥವಾ ಗರಿಷ್ಠ ಐದು ಪಂದ್ಯಗಳನ್ನು ನಿಗದಿ ಮಾಡಲಾಗುತ್ತದೆ. ಟೆಸ್ಟ್ ಚಾಂಪಿಯನಶಿಪ್‌ನಲ್ಲಿ ಹಗಲು ರಾತ್ರಿ ಸೇರಿದಂತೆ ಒಟ್ಟು ಐದು ದಿನಗಳನ್ನು ನಿಗದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com