ಕ್ರಿಕೆಟ್‌ ಮುಗಿತು, 2ನೇ ಇನ್ನಿಂಗ್ಸ್ ಆರಂಭಿಸಿದ ಯುವರಾಜ್ ಸಿಂಗ್, ಹೊಸ ಗೆಟಪ್‌ನಲ್ಲಿ 'ಯುವಿ' ಮಿಂಚಿಂಗ್!

2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಹೀರೋ ಆಗಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಇದರ ಬೆನ್ನಲೇ ನಟನೆಗೆ ಇಳಿದಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್
ಮುಂಬೈ: 2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಹೀರೋ ಆಗಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಇದರ ಬೆನ್ನಲೇ ನಟನೆಗೆ ಇಳಿದಿದ್ದಾರೆ.
ತಮ್ಮ 19 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಯುವರಾಜ್ ಸಿಂಗ್ ವಿದಾಯ ಘೋಷಿಸಿದ್ದರು. ಇದೀಗ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿರುವ ದಿ ಆಫೀಸ್ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಆಫೀಸ್ ಇಂಟರ್ ನ್ಯಾಷನಲ್ ವೆಬ್ ಸಿರೀಸ್ ಆಗಿದ್ದು ಈಗ ಇದೇ ಹೆಸರಿನಲ್ಲಿ ಭಾರತದಲ್ಲೂ ತಯಾರಾಗಿದೆ. 
ತಮ್ಮು ವೆಬ್ ಸಿರೀಸ್ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಅವರು ಕ್ರಿಕೆಟ್ ನಿವೃತ್ತಿ ಬಳಿಕ ಏನಾದರೂ ಹೊಸದಾಗಿ ಮಾಡಬೇಕು ಎನಿಸಿತ್ತು. ಹೊಸತನದ ಜೊತೆಗೆ ಫನ್ ಮಾಡಬೇಕು ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ದಿ ಆಫೀಸ್ ಶೂಟಿಂಗ್ ಮುಗಿದಿದೆ. ಈ ಸ್ಪೆಷಲ್ ಕಾರ್ಯಕ್ರಮ ಜನರಿಗೆ ಕಂಡಿತವಾಗಿಯೂ ಇಷ್ಟವಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com