ಗಂಭೀರ್ ಬಳಿಕ ಶಾಹೀದ್ ಆಫ್ರಿದಿ ವಿರುದ್ಧ ತಿರುಗಿಬಿದ್ದ ಪಾಕ್‌ ಮಾಜಿ ಕ್ರಿಕೆಟಿಗ ಇಮ್ರಾನ್ ಫರ್ಹಾತ್!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿಯ ದುರಹಂಕಾರದ ವರ್ತನೆಯನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಟುವಾಗಿ ಟೀಕಿಸಿದ್ದು...
ಗೌತಮ್ ಗಂಭೀರ್-ಶಾಹೀದ್ ಆಫ್ರಿದಿ-ಇಮ್ರಾನ್ ಫರ್ಹಾತ್-
ಗೌತಮ್ ಗಂಭೀರ್-ಶಾಹೀದ್ ಆಫ್ರಿದಿ-ಇಮ್ರಾನ್ ಫರ್ಹಾತ್-
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿಯ ದುರಹಂಕಾರದ ವರ್ತನೆಯನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಟುವಾಗಿ ಟೀಕಿಸಿದ್ದು ಇದರ ಬೆನ್ನಲ್ಲೇ ಇದೀಗ ಆಫ್ರಿದಿ ವಿರುದ್ಧ ಪಾಕ್‌ನ ಮಾಜಿ ಕ್ರಿಕೆಟಿಗ ಇಮ್ರಾನ್ ಫರ್ಹಾತ್ ತಿರುಗಿಬಿದ್ದಿದ್ದಾರೆ.
ಶಾಹೀದ್ ಆಫ್ರಿದಿ ಅವರ ಆತ್ಮಚರಿತ್ರೆ ಗೇಮ್ ಚೇಂಜರ್ ಸದ್ಯ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಅಲ್ಲದೆ ಪುಸ್ತಕದಲ್ಲಿ ಪಾಕ್ ನ ಹಿರಿಯ ಕ್ರಿಕೆಟಿಗರ ಚಾರಿತ್ರ್ಯವಧೆಗೆ ಕಾರಣವಾಗುವಂತಹ ಅಂಶಗಳಿಗೆ ಎಂದು ಇಮ್ರಾನ್ ಫರ್ಹಾತ್ ಹೇಳಿದ್ದಾರೆ.
ಆಫ್ರಿದಿ ಓರ್ವ ಸ್ವಾರ್ಥ ಕ್ರಿಕೆಟಿಗನಾಗಿದ್ದ. ತಮ್ಮ ಸ್ವಾರ್ಥಕ್ಕೋಸ್ಕರ ಅನೇಕ ಕ್ರಿಕೆಟಿಗರ ಜೀವನವನ್ನೇ ಹಾಳು ಮಾಡಿದ್ದಾರೆ. ಇಂತಹವರು ಇಂದು ತಮ್ಮ ಆತ್ಮಚರಿತ್ರೆಯಲ್ಲಿ ಲೆಜೆಂಡ್ ಎಂದು ಬಿಂಬಿಸಿಕೊಂಡಿದ್ದಾರೆ. 20 ವರ್ಷಗಳ ಕಾಲ ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ ಆಟಗಾರನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂಬಂತೆ ಫರ್ಹಾತ್ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಮಧ್ಯೆ ಪುಸ್ತಕದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಗ್ಗೆ ಉಲ್ಲೇಖಿಸಿ ಈ ಆಟಗಾರ ಯಾವುದೇ ಹೇಳಿಕೊಳ್ಳುವಂತಹ ದಾಖಲೆಗಳನ್ನು ಬರೆಯದಿದ್ದರೂ, ಈತನ ಹುರಹಂಕಾರಕ್ಕೆ ಏನು ಕಡಿಮೆಯಿಲ್ಲ ಎಂದು ಬರೆದಿದ್ದು ಇದು ಮಾಜಿ ಆಟಗಾರರ ನಡುವೆ ವಾಕ್ಸಮರಕ್ಕೆ ಕಾಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com