ಪಾಕ್ ವಿರುದ್ಧ ಡೇವಿಡ್ ವಾರ್ನರ್ ಅಜೇಯ ತ್ರಿಶತಕ, ಸ್ಟೀವ್ ಸ್ಮಿತ್ ನಿಂದ ಹೊಸ ದಾಖಲೆ!  

ಪಾಕ್ ವಿರುದ್ಧದ ಹೊನಲು-ಬೆಳಕಿನ 2 ನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ ಚೊಚ್ಚಲ ತ್ರಿಶತಕ ಭಾರಿಸಿ ದಾಖಲೆ ಬರೆದಿದ್ದಾರೆ. 
ಪಾಕ್ ವಿರುದ್ಧ ಡೇವಿಡ್ ವಾರ್ನರ್ ಅಜೇಯ ತ್ರಿಶತಕ, ಸ್ಟೀವ್ ಸ್ಮಿತ್ ನಿಂದ ಹೊಸ ದಾಖಲೆ!
ಪಾಕ್ ವಿರುದ್ಧ ಡೇವಿಡ್ ವಾರ್ನರ್ ಅಜೇಯ ತ್ರಿಶತಕ, ಸ್ಟೀವ್ ಸ್ಮಿತ್ ನಿಂದ ಹೊಸ ದಾಖಲೆ!

ಅಡಿಲೇಡ್: ಪಾಕ್ ವಿರುದ್ಧದ ಹೊನಲು-ಬೆಳಕಿನ 2 ನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ ಚೊಚ್ಚಲ ತ್ರಿಶತಕ ಭಾರಿಸಿ ದಾಖಲೆ ಬರೆದಿದ್ದಾರೆ. 

ಸ್ಟೀವ್ ಸ್ಮಿತ್ 7,000 ರನ್ ಗಳನ್ನು ಪೂರೈಸುವ ಮೂಲಕ ಟೆಸ್ಟ್ ನಲ್ಲಿ ಅತಿ ವೇಗವಾಗಿ 7,000 ರನ್ ಪೂರೈಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಎರಡನೇ ದಿನದ ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿದ್ದು, ವಾರ್ನರ್ 335 ರನ್ ಗಳಿಸುತ್ತಿದ್ದಂತೆಯೇ ಆಸ್ಟ್ರೇಲಿಯಾ ನಾಯಕ ನಾಯಕ ಟಿಮ್ ಪೈನೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ನಾಯಕನ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಒಂದು ವೇಳೆ ಆಸ್ಟ್ರೇಲಿಯಾ ತಂಡ ಡಿಕ್ಲೇರ್ ಮಾಡಿಕೊಳ್ಳದೇ ಇದ್ದಿದ್ದರೆ ಅಜೇಯರಾಗಿ 400 ರನ್ ಗಳಿಸಿದ್ದ ಬ್ರೇನ್ ಲಾರಾ ಅವರ ದಾಖಲೆಯನ್ನು ಮುರಿಯುವ ಅವಕಾಶ ಡೇವಿಡ್ ವಾರ್ನರ್ ಗೆ ಇತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com