ವಿವಾದಾತ್ಮಕ 'ಬೌಂಡರಿ ಕೌಂಟ್' ನಿಯಮ ಕೊನೆಗೂ ರದ್ದು!

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಟಕೀಯ ಜೊತೆಗೆ ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದ ಬೌಂಡರಿ ಕೌಂಟ್ ನಿಯಮ ಕೊನೆಗೂ ರದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಡಳಿ ಸಭೆಯಲ್ಲಿ ಈ ನಿಯಮವನ್ನು ರದ್ದುಪಡಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದುಬೈ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಟಕೀಯ ಜೊತೆಗೆ ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದ ಬೌಂಡರಿ ಕೌಂಟ್ ನಿಯಮ ಕೊನೆಗೂ ರದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಡಳಿ ಸಭೆಯಲ್ಲಿ ಈ ನಿಯಮವನ್ನು ರದ್ದುಪಡಿಸಲಾಗಿದೆ.

2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೂಪರ್ ಓವರ್ ಹಂತ ಟೈ ಆದಾಗ, ಬೌಂಡರಿ ನಿಯಮಗಳ ಆಧಾರದ ಮೇಲೆ ಇಂಗ್ಲೆಂಡ್  ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು. ಆದರೆ, ನ್ಯೂಜಿಲೆಂಡ್  ತಂಡದ ಪರ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಬೌಂಡರಿ ಕೌಂಟ್ ನಿಯಮದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. 

ಐಸಿಸಿಯ ಮುಂದಿನ ಟೂರ್ನಿಗಳಲ್ಲಿ ಬೌಂಡರಿ ಕೌಂಟ್ ನಿಯಮ ಬಳಕೆ ಮಾಡುವುದಿಲ್ಲ, ಗ್ರೂಪ್ ಹಂತದಲ್ಲಿ ಸೂಪರ್ ಓವರ್ ಕೂಡಾ ಟೈ ಆದರೆ ಪಂದ್ಯವನ್ನು ಟೈ ಎಂದೇ ನಿರ್ಧರಿಸಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ನಡೆಸಲಾಗುವ ಸೂಪರ್ ಓವರ್ ನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಒಂದು ತಂಡ ಒಟ್ಟು ರನ್ ಗಳಿಕೆಯಲ್ಲಿ ಮೇಲುಗೈ ಸಾಧಿಸುವವರೆಗೂ ಸೂಪರ್ ಓವರ್ ಮುಂದುವರೆಸಲಾಗುವುದು ಎಂದು ಐಸಿಸಿ ಪ್ರಕಟಿಸಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com