ಮಾಜಿ ಕ್ರಿಕೆಟರ್ ಮನೋಜ್ ಪ್ರಭಾಕರ್, ಕುಟುಂಬದ ವಿರುದ್ಧ ವಂಚನೆ, ಅತಿಕ್ರಮಣ ಪ್ರಕರಣ ದಾಖಲು

ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ , ಅವರ ಪತ್ನಿ, ಮಗ ಸೇರಿದಂತೆ ಮತ್ತಿಬ್ಬರ ವಿರುದ್ಧ ದೆಹಲಿ ಪೊಲೀಸರು ವಂಚನೆ, ಅತಿಕ್ರಮಣ ಪ್ರಕರಣವನ್ನು ದಾಖಲಿಸಿದ್ದಾರೆ.
ಮನೋಜ್ ಪ್ರಭಾಕರ್
ಮನೋಜ್ ಪ್ರಭಾಕರ್

ನವದೆಹಲಿ: ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ , ಅವರ ಪತ್ನಿ, ಮಗ ಸೇರಿದಂತೆ ಮತ್ತಿಬ್ಬರ ವಿರುದ್ಧ ದೆಹಲಿ ಪೊಲೀಸರು ವಂಚನೆ, ಅತಿಕ್ರಮಣ ಪ್ರಕರಣವನ್ನು ದಾಖಲಿಸಿದ್ದಾರೆ.

 ಲಂಡನ್ ನಲ್ಲಿರುವ ಸಂಧ್ಯಾ ಶರ್ಮಾ ಪಂಡಿತ್ ಎಂಬವರಿಂದ ದೂರನ್ನು ಸ್ವೀಕರಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಸರ್ವಪ್ರಿಯ ವಿಹಾರದಲ್ಲಿನ ಅಪಾರ್ಟ್ ಮೆಂಟ್ ನ ಎರಡನೇ ಅಂತಸ್ತಿನಲ್ಲಿ ಫ್ಲಾಟ್  ಹೊಂದಿರುವುದಾಗಿ ತಿಳಿಸಿರುವ ಸಂಧ್ಯಾ ಶರ್ಮಾ, ಮೊದಲ ಅಂತಸ್ತಿನಲ್ಲಿದ್ದ  ಪ್ರಭಾಕರ್ ಹಾಗೂ ಅವರ ಕುಟುಂಬದವರು ಅಕ್ರಮವಾಗಿ ತಮ್ಮ  ಮನೆಗೆ ನುಗ್ಗಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

1995ರಲ್ಲಿ ತಮ್ಮ ಪತಿ ಲಕ್ಷ್ಮಿ ಚಂದ್ ಪಂಡಿತ್ ಬಿಲ್ಡರ್ ಒಬ್ಬರಿಂದ ಫ್ಲಾಟ್ ಖರೀದಿಸಿದ್ದು, ಲಂಡನ್ ಗೆ  ಸ್ಥಳಾಂತರವಾಗುವವರೆಗೂ 2006ರವರೆಗೂ ಈ ಫ್ಲಾಟ್ ನಲ್ಲಿಯೇ ವಾಸಿಸುತ್ತಿದ್ದೇವು. ತದನಂತರ ತಮ್ಮ ಸಂಬಂಧಿಕರಿಗೆ ಫ್ಲಾಟ್ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಸಂಬಂಧಿಕರು ಫ್ಲಾಟ್ ತೊರದಿದ್ದು, ಆಗಿನಿಂದಲೂ ಬೀಗ ಹಾಕಲಾಗಿತ್ತು.  ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಗೆ ಬಂದು ಫ್ಲಾಟ್ ಗೆ ಹೋಗಲು ಪ್ರಯತ್ನಿಸಿದಾಗ ಅದನ್ನು ಅತಿಕ್ರಮಿಸಿಕೊಂಡವರಿಂದ ಪ್ರವೇಶ ನಿರಾಕರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಭಾಕರ್ ಮತ್ತಿತರಿಂದ ತ್ಮ ಫ್ಲಾಟ್ ನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂದು ಆ ಮಹಿಳೆ ದೂರಿದ್ದು, ಪ್ರಭಾಕರ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಮಹಿಳೆ ಮಾಡಿರುವ ಆರೋಪವನ್ನು ನಿರಾಕರಿಸಿರುವ ಪ್ರಭಾಕರ್,  ಕಳೆದ 23 ವರ್ಷಗಳಿಂದ ಫ್ಲಾಟ್ ನ ಮೊದಲ ಅಂತಸ್ತಿನಲ್ಲಿಯೇ ವಾಸಿಸುತ್ತಿದ್ದೇನೆ. ಆಗಿನಿಂದಲೂ ಆ ಮಹಿಳೆಯನ್ನು ನೋಡಿಯೇ ಇಲ್ಲ. ಎರಡನೇ ಅಂತಸ್ತಿನಲ್ಲಿ ಯಾರು ವಾಸಿಸುತ್ತಿದ್ದರು ಎಂಬುದು ತಮ್ಮಗೆ ಗೊತ್ತಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com