ಕೆಪಿಎಲ್ 2019: ಬಳ್ಳಾರಿಯನ್ನು ಮಣಿಸಿದ ಹುಬ್ಬಳ್ಳಿ ಟೈಗರ್ಸ್ ಗೆ ಚಾಂಪಿಯನ್ ಪಟ್ಟ

ಆಲ್ ರೌಂಡರ್ ಎಟಿ ಸೋಮಣ್ಣ ಹಾಗೂ ಅಭಿಲಾಷ್ ಶೆಟ್ಟಿ ಅವರು ಬಿಗುವಿನ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಫೈನಲ್ ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಮಣಿಸಿ, ಮೊದಲ ಬಾರಿಗೆ ಕಪ್ ಗೆ ಮುತ್ತಿಟ್ಟಿದೆ.
 

Published: 01st September 2019 08:21 AM  |   Last Updated: 01st September 2019 08:21 AM   |  A+A-


ಕೆಪಿಎಲ್ 2019: ಬಳ್ಳಾರಿಯನ್ನು ಮಣಿಸಿದ ಹುಬ್ಬಳ್ಳಿ ಟೈಗರ್ಸ್ ಗೆ ಚಾಂಪಿಯನ್ ಪಟ್ಟ

Posted By : Raghavendra Adiga
Source : UNI

ಮೈಸೂರು: ಆಲ್ ರೌಂಡರ್ ಎಟಿ ಸೋಮಣ್ಣ ಹಾಗೂ ಅಭಿಲಾಷ್ ಶೆಟ್ಟಿ ಅವರು ಬಿಗುವಿನ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಫೈನಲ್ ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಮಣಿಸಿ, ಮೊದಲ ಬಾರಿಗೆ ಕಪ್ ಗೆ ಮುತ್ತಿಟ್ಟಿದೆ.

2015 ಹಾಗೂ 2016ರಲ್ಲಿ ಫೈನಲ್ ಗೆ ಅರ್ಹತೆ ಪಡೆದರೂ, ಪ್ರಶಸ್ತಿ ಜಯಿಸುವಲ್ಲಿ ಎಡವಿತ್ತು. ಆದರೆ, ಶನಿವಾರ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಹುಬ್ಬಳ್ಳಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬಳ್ಳಾರಿ ತಂಡದ ಪರ ಆರಂಭ ಕಳಪೆಯಾಗಿತ್ತು. ಮಹತ್ವದ ಪಂದ್ಯದಲ್ಲಿ ಅಭಿಷೇಕ್ ರೆಡ್ಡಿ ಹಾಗೂ ಕೃಷ್ಣಪ್ಪ ಗೌತಮ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಭುವೇಶ್ ಗುಲೆಚಾ ಅವರ 15 ರನ್ ಇನ್ನಿಂಗ್ಸ್ ಗೆ ಅಭಿಲಾಷ್ ಶೆಟ್ಟಿ ಬ್ರೇಕ್ ಹಾಕಿದರು.  ಬಳ್ಳಾರಿ ಪರವಾಗಿ ದೇವದತ್ ಪಡಿಕಳ್ 68 (48), ಸಿಎಂ ಗೌತಮ್ 29, ಭವೇಶ್ ಗುಲೇಚಾ 15, ಅಬ್ರಾಝ್ ಖಾಝಿ 13 ರನ್‌ ಕೊಡುಗೆಯೊಂದಿಗೆ ಬಳ್ಳಾರಿ 20 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 144 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಳಿ ಟೈಗರ್ಸ್, ಆದಿತ್ಯ ಸೋಮಣ್ಣ 47 (38 ಎಸೆತ), ಲವನೀತ್ ಸಿಸೋಡಿಯಾ 29, ಪ್ರವೀಣ್ ದೂಬೆ ಅಜೇಯ 26, ಶ್ರೇಯಸ್ ಗೋಪಾಲ್ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿತ್ತು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp