ಅಫ್ರಿದಿ ದಾಖಲೆ ಮುರಿದ ಲಸಿತ್‌ ಮಲಿಂಗಾ

ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್‌ ಮಲಿಂಗಾ ಅವರು ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ.

Published: 02nd September 2019 11:58 AM  |   Last Updated: 02nd September 2019 11:58 AM   |  A+A-


Lasith Malinga

ಲಸಿತ್‌ ಮಲಿಂಗಾ

Posted By : Srinivas Rao BV
Source : Online Desk

ಕ್ಯಾಂಡಿ: ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್‌ ಮಲಿಂಗಾ ಅವರು ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ.

ಭಾನುವಾರ ನಡೆದ ಕಿವೀಸ್‌ ವಿರುದ್ಧದ ಪಂದ್ಯದಲ್ಲಿ 23 ರನ್‌ ನೀಡಿ ಎರಡು ವಿಕೆಟ್‌ ಕಬಳಿಸಿದರು. ಆ ಮೂಲಕ ಟಿ-20 ಕ್ರಿಕೆಟ್‌ನಲ್ಲಿ 99 ವಿಕೆಟ್‌ಗಳನ್ನು ಪೂರ್ಣಗೊಳಿಸಿ ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು. ಆ ಮೂಲಕ ಈ ಹಿಂದೆ 98 ವಿಕೆಟ್‌ ಕಿತ್ತು ಈ ಸಾಧನೆ ಮಾಡಿದ್ದ ಪಾಕಿಸ್ತಾನದ ಶೊಯೆಬ್‌ ಅಫ್ರಿದಿ ಅವರ ದಾಖಲೆಯನ್ನು ಮುರಿದರು.

ಈ ಸಾಧನೆ ಮಾಡಲು ಲಸಿತ್‌ ಮಲಿಂಗಾ 74 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಅಫ್ರಿದಿ 98 ವಿಕೆಟ್‌ ಪಡೆಯಲು 99 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
 

Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp