ಈತ ಟೀಂ ಇಂಡಿಯಾಗೆ ವರದಾನ: ಇರ್ಫಾನ್‌ ಪಠಾಣ್‌ ಕೊಂಡಾಡಿದ ಸ್ಟಾರ್ ವೇಗಿ ಇವರೇ?

ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಭಾರತದ ಯುವ ವೇಗಿಯೋರ್ವನನ್ನು ಕೊಂಡಾಡಿದ್ದಾರೆ.

Published: 04th September 2019 11:38 AM  |   Last Updated: 04th September 2019 11:38 AM   |  A+A-


Jasprit Bumrah-Virat Kohli

ಜಸ್ ಪ್ರೀತ್ ಬುಮ್ರಾ-ವಿರಾಟ್ ಕೊಹ್ಲಿ

Posted By : Vishwanath S
Source : UNI

ಕೊಲ್ಕತಾ: ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಭಾರತದ ಯುವ ವೇಗಿಯೋರ್ವನನ್ನು ಕೊಂಡಾಡಿದ್ದಾರೆ.

ಭಾರತ ತಂಡಕ್ಕೆ ವೇಗಿ ಜಸ್ಪ್ರಿತ್‌ ಬುಮ್ರಾ ಅತ್ಯಂತ ಪ್ರಮುಖ ಆಟಗಾರ ಎಂಬುದನ್ನು ನಂಬಿರುವ ಮಾಜಿ ವೇಗಿ ಇರ್ಫಾನ್‌ ಪಠಾಣ್‌, ವೆಸ್ಟ್ ಇಂಡೀಸ್‌ ವಿರುದ್ಧದ ಅವರ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಇದೇ ಕೊನೆಯಲ್ಲಾ ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅವರು ಹ್ಯಾಟ್ರಿಕ್‌ ಸೇರಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದರು. ಇವರ ಮಾರಕ ದಾಳಿಯ ನೆರವಿನಿಂದ ಭಾರತ ಎರಡನೇ ಪಂದ್ಯ ಗೆದ್ದು ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್‌ ಮಾಡಿಕೊಂಡಿದೆ. ಆ ಮೂಲಕ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 120 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದೆ. 

25 ರ ಪ್ರಾಯದ ಬುಮ್ರ ಅವರು ಎಲ್ಲ ಮಾದರಿಯಲ್ಲಿ ವಿಶ್ವ ಶ್ರೇಷ್ಠ ಬೌಲರ್ ಎಂದೆನಿಸಿಕೊಂಡಿದ್ದಾರೆ.  ಬುಮ್ರಾ ಅವರು ಕಳೆದ ಎರಡು ದಿನಗಳ ಹಿಂದೆ ಹರಭಜನ್‌ ಸಿಂಗ್‌ ಹಾಗೂ ಇರ್ಪಾನ್‌ ಪಠಾಣ್ ಅವರ ಹ್ಯಾಟ್ರಿಕ್‌ ಕ್ಲಬ್‌ಗೆ ಸೇರ್ಪಡೆಗೊಂಡಿದ್ದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp