ಕೊರೋನಾ ವೈರಸ್: ಪರಿಹಾರ ಕಾರ್ಯಗಳಿಗಾಗಿ ಬ್ಯಾಟ್ ಹರಾಜು ಹಾಕಿದ ಮುಷ್ಫಿಕರ್

ಬಾಂಗ್ಲಾದೇಶದ ಸ್ಟಾರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಕೊರೊನಾ ಪರಿಹಾರ ಕಾರ್ಯಾಚರಣೆಗಾಗಿ ತಮ್ಮ ಬ್ಯಾಟ್ ಅನ್ನು ಹರಾಜು ಹಾಕಲಿದ್ದಾರೆ.
ಮುಷ್ಫಿಕರ್ ರೆಹಮಾನ್
ಮುಷ್ಫಿಕರ್ ರೆಹಮಾನ್
Updated on

ಢಾಕಾ: ಬಾಂಗ್ಲಾದೇಶದ ಸ್ಟಾರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಕೊರೊನಾ ಪರಿಹಾರ ಕಾರ್ಯಾಚರಣೆಗಾಗಿ ತಮ್ಮ ಬ್ಯಾಟ್ ಅನ್ನು ಹರಾಜು ಹಾಕಲಿದ್ದಾರೆ.

ಮುಷ್ಫೀಕರ್‍ 2013 ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಟೆಸ್ಟ್ ನಲ್ಲಿ ಡಬಲ್ ಶತಕವನ್ನು ಗಳಿಸಿದ ಬ್ಯಾಟ್‍ ಹರಾಜಿಗಿಟ್ಟಿದ್ದಾರೆ. “ನಾನು ಮೊದಲ ದ್ವಿಶತಕ ಗಳಿಸಿದ ಬ್ಯಾಟ್ ಅನ್ನು ಹರಾಜು ಮಾಡುತ್ತೇನೆ. ಈ ಹರಾಜು ಆನ್‌ಲೈನ್‌ನಲ್ಲಿರುತ್ತದೆ ಮತ್ತು ಅದು ಎಷ್ಟು ಹಣಕ್ಕೆ ಬಿಕರಿ ಆಗುತ್ತದೋ ಕಾದು ನೋಡೋಣ. ಇದರಿಂದ ಬರುವ ಆದಾಯವನ್ನು ಬಡ ಜನರಿಗೆ ಖರ್ಚು ಮಾಡಲಾಗುವುದು" ಎಂದಿದ್ದಾರೆ.

ಕೊರೋನಾ ಹೊಡೆತಕ್ಕೆ ಬಾಂಗ್ಲಾದೇಶ ಸಹ ತತ್ತರಿಸಿದ್ದು 2,456 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು 91 ಮಂದಿ ಸಾವಿಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com