ಮುಂಬೈ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳು ರದ್ದಾಗಿವೆ ಇಲ್ಲವೇ ಮುಂದೂಡಿಕೆಯಾಗಿವೆ. ಈ ಮಧ್ಯೆ ಲಾಕ್ ಡೌನ್ ಆಗಿರುವ ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಫನ್ನಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದು ಈಗ ವೈರಲ್ ಆಗಿದೆ.
ಇನ್ನು ಅನುಷ್ಕಾ ವಿಡಿಯೋಗೆ ತಮಾಷೆಯಾಗಿ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು, ‘ಅತ್ತಿಗೆ, ಮುಂದಿನ ಬಾರಿ ಟೀಂ ಇಂಡಿಯಾಗೆ ನನ್ನನ್ನು ಆರಂಭಿಕರಾಗಿ ಮಾಡಿ ಎಂದು ಕೊಹ್ಲಿಗೆ ಹೇಳಿ’ ಎಂದಿದ್ದಾರೆ.
ಅನುಷ್ಕಾ ಶರ್ಮಾ ಅಭಿಮಾನಿಗಳು ಮೈದಾನದಲ್ಲಿ ‘ಕೊಹ್ಲಿ ಸಿಕ್ಸರ್ ಮಾರ್ ದೋ’ ಎಂದು ಮಿಮಿಕ್ರಿ ಮಾಡಿ ಕೊಹ್ಲಿಯನ್ನು ರಂಜಿಸುವ ವಿಡಿಯೋವೊಂದನ್ನು ಅನುಷ್ಕಾ ಪೋಸ್ಟ್ ಮಾಡಿದ್ದರು.
ಈ ವಿಡಿಯೊದಲ್ಲಿ ಅನುಷ್ಕಾ ಕೊಹ್ಲಿ ಅಭಿಮಾನಿಯಾಗಿದ್ದು ಏಯ್ ಕೊಹ್ಲಿ... ಕೊಹ್ಲಿ... ಬೌಂಡರಿ ಹೊಡಿ ಎಂದು ಹೇಳಿದ್ದಾರೆ. ಅದು ಪಕ್ಕಾಲೋಕಲ್ ಭಾಷೆಯಲ್ಲಿ! ಇದಕ್ಕೆ ಕೊಹ್ಲಿ ತಮ್ಮ ಕಣ್ಣುಗಳ ಮೂಲಕವೇ ಉತ್ತರ ಕೊಡುವುದು ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ಅವರಿಗೆ ಅಭಿಮಾನಿಗಳಿಂದ ಪ್ರೀತಿ ಸಿಗುತ್ತದೆ. ಅದರಲ್ಲೂ ಅವರು ಇಂತಹ ಅಭಿಮಾನಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಅಂತಹ ಅಭಿಮಾನಿಯಂತೆ ನಟಿಸಿ ಆ ಪ್ರೀತಿ ಕೊಡುವ ಪುಟ್ಟ ಪ್ರಯತ್ನ ಇದು ಎಂದು ಅನುಷ್ಕಾ ಶರ್ಮಾ ವಿಡಿಯೊ ಜೊತೆಗೆ ಬರೆದುಕೊಂಡಿದ್ದಾರೆ.
Advertisement