ಇಮ್ರಾನ್ ಖಾನ್ ದೇವರಂತೆ ವರ್ತಿಸುತ್ತಿದ್ದಾರೆ, ಪಾಕ್ ಕ್ರಿಕೆಟ್ ಅನ್ನು ಹಾಳು ಮಾಡಿದ್ದಾರೆ: ಜಾವೇದ್ ಮಿಯಾಂದಾದ್

ಪ್ರಸ್ತುತ ಪಾಕ್ ಪ್ರಧಾನಿಯಿಂದ ದೇಶದಲ್ಲಿ ಕ್ರಿಕೆಟ್ ಹಾಳಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ತಮ್ಮ ಮಾಜಿ ತಂಡದ ಆಟಗಾರ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಮ್ರಾನ್ ಖಾನ್-ಜಾವೇದ್ ಮಿಯಾಂದಾದ್
ಇಮ್ರಾನ್ ಖಾನ್-ಜಾವೇದ್ ಮಿಯಾಂದಾದ್

ಲಾಹೋರ್: ಪ್ರಸ್ತುತ ಪಾಕ್ ಪ್ರಧಾನಿಯಿಂದ ದೇಶದಲ್ಲಿ ಕ್ರಿಕೆಟ್ ಹಾಳಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ತಮ್ಮ ಮಾಜಿ ತಂಡದ ಆಟಗಾರ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕ್ರೀಡೆಯ ಬಗ್ಗೆ ಶೂನ್ಯ ಜ್ಞಾನ ಹೊಂದಿರುವ ಅಧಿಕಾರಿಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ನೇಮಿಸುವ ಮೂಲಕ ಇಮ್ರಾನ್ ಪಾಕಿಸ್ತಾನದ ಕ್ರಿಕೆಟ್ ವ್ಯವಹಾರವನ್ನು ಹಾಳು ಮಾಡಿದ್ದಾರೆ ಎಂದು ಮಿಯಾಂದಾದ್ ಹೇಳಿದ್ದಾರೆ.

"ಪಿಸಿಬಿಯ ಎಲ್ಲ ಅಧಿಕಾರಿಗಳಿಗೆ ಕ್ರಿಕೆಟ್ ಬಗ್ಗೆ ಎಬಿಸಿ ಗೊತ್ತಿಲ್ಲ. ಸದ್ಯದ ಪರಿಸ್ಥಿತಿ ಬಗ್ಗೆ ನಾನು ಇಮ್ರಾನ್ ಖಾನ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಬಯಸುತ್ತೇನೆ. ನಮ್ಮ ದೇಶಕ್ಕೆ ಸರಿ ಹೊಂದದಿರುವುದನ್ನು ಆಗಲು ನಾನು ಬಿಡುವುದಿಲ್ಲ ಎಂದು ಮಿಯಾಂದಾದ್ ಬಿಡುಗಡೆ ಮಾಡಿದ ಯೂಟ್ಯೂಬ್ ವೀಡಿಯೊದಲ್ಲಿ ತಿಳಿಸಿದ್ದಾರೆ.

ಪಿಸಿಬಿ ಸಿಇಒ ವಾಸಿಮ್ ಖಾನ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಹೀಗೆ ಹೇಳಿದರು: "ನೀವು ಒಬ್ಬ ವ್ಯಕ್ತಿಯನ್ನು ವಿದೇಶದಿಂದ ಕರೆತಂದಿದ್ದೀರಿ, ವಿದೇಶಿಗರ ಮೇಲೆ ನೀವು ಹೆಚ್ಚು ಅವಲಂಬಿತರಾಗಿದ್ದೀರಿ. ಅವರ ಉದ್ದೇಶಗಳು ಕೆಟ್ಟದ್ದಾಗಿದೆ ಎಂಬುದು ನಿಮಗೆ ತಿಳಿದಿಲ್ಲ. ವಸೀಮ್ ಮತ್ತು ಎಹ್ಸಾನ್ ಎಂತಹ ವ್ಯಕ್ತಿಗಳು ಎಂಬುದು ನಿಮಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. 

"ಪ್ರಸ್ತುತ ಆಡುತ್ತಿರುವ ಆಟಗಾರರು ಕ್ರಿಕೆಟ್‌ನಲ್ಲಿ ದೊಡ್ಡ ಭವಿಷ್ಯವನ್ನು ಹೊಂದಬೇಕು. ಭವಿಷ್ಯದಲ್ಲಿ ಈ ಆಟಗಾರರು ಕಾರ್ಮಿಕರಾಗಿ ಹೊರಹೋಗುವುದು ನಾನು ಬಯಸುವುದಿಲ್ಲ. ಪಿಸಿಬಿ ಡಂಪ್ ಮಾಡಿದ ನಂತರ ಆಟಗಾರರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿದೇಶಿಗರನ್ನು ನೀವು ಪಾಕ್ ಕ್ರಿಕೆಟ್ ಮಂಡಳಿಗೆ ನೇಮಿಸಿದರೆ ಅವರು ಇಲ್ಲೇನಾದರೂ ದೊಡ್ಡ ಅವ್ಯವಹಾರ ಮಾಡಿದರೆ ವಿದೇಶಕ್ಕೆ ಹಾರಿಬಿಡುತ್ತಾರೆ. ನಂತರ ಅವರ ಮಾಡಿದ ಕರ್ಮಗಳಿಗೆ ಹೊಣೆ ಯಾರು? ಎಂದು ಮಿಯಾಂದಾದ್ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com