ಟೆಸ್ಟ್‌ ಶ್ರೇಯಾಂಕ: ಎರಡನೇ ಸ್ಥಾನದಲ್ಲಿಯೇ ಉಳಿದ ವಿರಾಟ್‌ ಕೊಹ್ಲಿ, ಬುಮ್ರಾ 9ನೇ ಸ್ಥಾನ 

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದ ಐಸಿಸಿ ಟೆಸ್ಟ್ ಶ್ರೇಯಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ತಂಡದ ನಾಯಕ ವಿರಾಟ್ ಎರಡನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಕೊಹ್ಲಿ ಜತೆ ಇನ್ನೂ ಇಬ್ಬರು ಬಾರತೀಯ ಬ್ಯಾಟ್ಸ್ ಮನ್ ಗಳು ಅಗ್ರ 10ರೊಳಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದ ಐಸಿಸಿ ಟೆಸ್ಟ್ ಶ್ರೇಯಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ತಂಡದ ನಾಯಕ ವಿರಾಟ್ ಎರಡನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಕೊಹ್ಲಿ ಜತೆ ಇನ್ನೂ ಇಬ್ಬರು ಬಾರತೀಯ ಬ್ಯಾಟ್ಸ್ ಮನ್ ಗಳು ಅಗ್ರ 10ರೊಳಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಭಾರತ ತಂಡದ ವೇಗಿ ಜಸ್ಪ್ರಿತ್ ಬುಮ್ರಾ ಅವರು ಐಸಿಸಿ ಬೌಲಿಂಗ್ ಶ್ರೇಯಾಂಕದಲ್ಲಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್ ಕೊಹ್ಲಿ 886 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದು, ಚೇತೇಶ್ವರ ಪೂಜಾರ 766 ಪಾಯಿಂಟ್ ಗಳೊಂದಿಗೆ ಎಂಟನೇ ಸ್ಥಾನ ಹಾಗೂ ಅಜಿಂಕ್ಯಾ ರಹಾನೆ 726 ಅಂಕಗಳೊಂದಿಗೆ 10ನೇ ಸ್ಥಾನಲ್ಲಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್  ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಜಸ್ಪ್ರಿತ್ ಬುಮ್ರಾ ಒಂದು ಸ್ಥಾನವನ್ನು ಕಳೆದುಕೊಂಡಿದ್ದು, 9ನೇ ಕ್ರಮಾಂಕಕ್ಕೆ ಇಳಿದಿದ್ದಾರೆ. ರವಿಚಂದ್ರನ್  ಅಶ್ವಿನ್  ಆಲ್ ರೌಂಡರ್ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ ಪಾಕಿಸ್ತಾನ ತಂಡದ ಬಾಬರ್ ಅಝಮ್ ಬ್ಯಾಟಿಂಗ್ ವಿಭಾಗದಲ್ಲಿ ವೃತ್ತಿ  ಜೀವನದಲ್ಲಿ ಶ್ರೇಷ್ಠ ಐದನೇ ಶ್ರೇಯಾಂಕವನ್ನು ಮತ್ತೊಮ್ಮೆ ಪಡೆದಿದ್ದಾರೆ. ಇಂಗ್ಲೆಂಡ್  ತಂಡದ ಹಿರಿಯ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಅಂಡರ್ಸನ್ ಬೌಲಿಂಗ್  ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಾಬರ್ ಅಝಮ್ ಇದೇ ವರ್ಷದ ಆರಂಭದ ಫೆಬ್ರುವರಿಯಲ್ಲಿ 5ನೇ ಸ್ಥಾನ ಪಡೆದಿದ್ದರು. ಇದೀಗ ಅದೇ ಸ್ಥಾನವನ್ನೇ ಅಲಂಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com