ಐಪಿಎಲ್ 2020: ದುಬೈ ಗೆ ಹೊರಟ ಕಾಪ್ಟನ್ ಕೊಹ್ಲಿಯ  ರಾಯಲ್ ಚಾಲೆಂಜರ್ಸ್

ರಾರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2020 ರ ಈ ವಿಶಿಷ್ಟಋತುವನ್ನು ಸಮರ್ಪಿತ ಮತ್ತು ಹೆಚ್ಚು ಸುರಕ್ಷಿತ ಬಯೋ ಸೆಕ್ಯೂರ್ ವಾತಾವರಣದಲ್ಲಿ ಪ್ರಾರಂಭಿಸಲು ಸಿದ್ದವಾಗಿದೆ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಆದರೆ ಯುಎಇಯಲ್ಲಿ ಐಪಿಎಲ್ 2020 ರಲ್ಲಿ ಈ ಬಾರಿ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸುವ ವಿಶ್ವಾಸ ತಂಡಕ್ಕಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು
Updated on: 

ಬೆಂಗಳೂರು: ರಾರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2020 ರ ಈ ವಿಶಿಷ್ಟಋತುವನ್ನು ಸಮರ್ಪಿತ ಮತ್ತು ಹೆಚ್ಚು ಸುರಕ್ಷಿತ ಬಯೋ ಸೆಕ್ಯೂರ್ ವಾತಾವರಣದಲ್ಲಿ ಪ್ರಾರಂಭಿಸಲು ಸಿದ್ದವಾಗಿದೆ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಆದರೆ ಯುಎಇಯಲ್ಲಿ ಐಪಿಎಲ್ 2020 ರಲ್ಲಿ ಈ ಬಾರಿ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸುವ ವಿಶ್ವಾಸ ತಂಡಕ್ಕಿದೆ,

ಆರ್‌ಸಿಬಿ  ಆಗಸ್ಟ್ 21 ರಂದು ದುಬೈ ತಲುಪಲಿದ್ದು, ಆಗಸ್ಟ್ 29 ರಿಂದ ಮೈಕ್ ಹೆಸ್ಸನ್ ಮತ್ತು ಸೈಮನ್ ಕಟಿಚ್ ಅವರ ಸಹಯೋಗದೊಂದಿಗೆ ಭಾರತೀಯ ಮತ್ತು ಅಂತರರಾಷ್ಟ್ರೀಯ ಆಟಗಾರರೊಂದಿಗೆ 3 ವಾರಗಳ ಶಿಬಿರವನ್ನು ಪ್ರಾರಂಭಿಸಲಿದೆ. ಪ್ರಸಿದ್ಧ ಕ್ರೀಡಾ ಮನಶ್ಶಾಸ್ತ್ರಜ್ಞ- ಡಾ. ಚೈತನ್ಯ ಶ್ರೀಧರ್ ಮತ್ತು ಡಾ. ಚಾರ್ಲ್ಸ್ ಮಿನ್ಜ್‌ ಸೇರಿದಂತೆ ತಜ್ಞ -ವೈದ್ಯರನ್ನು ನೇಮಕ ಮಾಡುವ ಮೂಲಕ ಆರ್‌ಸಿಬಿ ಈ ಋತುವಿನಲ್ಲಿ ಸಪೋರ್ಟಿಂಗ್ ಸ್ಟಾಫ್ ಗಳನ್ನು ಹೆಚ್ಚಿಸಿಕೊಂಡಿದೆ, 

ತಂಡದ ತಯಾರಿ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಖ್ಯಸ್ಥ ಸಂಜೀವ್ ಚುರಿವಾಲಾ, ಮಾತನಾಡಿ  “ಆರ್‌ಸಿಬಿಯ ಅತಿದೊಡ್ಡ ಶಕ್ತಿ ಎಂದರೆ ಪ್ರೀತಿ. ತಂಡವು ಅವರ ಅಭಿಮಾನಿಗಳಿಂದ ಬೆಂಬಲ ಪಡೆಯಲಿದೆ, ಇದು ವಿಭಿನ್ನಋತುಮಾನವಾಗಲಿದ್ದು, ಅಲ್ಲಿ ಜನಸಂದಣಿಯ ಭಿಮಾನದ ಕೂಗು ಇರುವುದಿಲ್ಲ. ಅಲ್ಲದೆ ತಂಡ ಎರಡು ತಿಂಗಳ ಕಾಲ ಪ್ರತ್ಯೇಕತೆಯಲ್ಲಿರಲಿದೆ, ಅವರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ಈ ಸಮಯದಲ್ಲಿ ತಂಡಕ್ಕೆ ಸರಿಯಾದ ಬೆಂಬಲವನ್ನು ನೀಡುವುದು ಇನ್ನೂ ಮುಖ್ಯವಾಗಿದೆ, ಇದರಿಂದಾಗಿ ಅವರು ನಿಜವಾದ ಚಾಲೆಂಜರ್‌ಗಳಾಗಿ ಘರ್ಜಿಸಿ ಕ್ರೀಡಾಂಗಣಗಳಿಗೆ ಕಾಲಿಡಬಹುದು. ” ಎಂದಿದ್ದಾರೆ.

 ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಹೀಗಿದೆ-
ವಿರಾಟ್ ಕೊಹ್ಲಿ (ನಾಯಕ), ಆರೋನ್ ಫಿಂಚ್, ಕೇನ್ ರಿಚರ್ಡ್‌ಸನ್, ಜೋಶ್ ಫಿಲಿಪ್, ಎಬಿ ಡೀ ವಿಲಿಯರ್ಸ್, ಸ್ಟೊಫೆರ್ ಡಬ್ಲೂ. ಮಾರಿಸ್, ಡೇಲ್ ಸ್ಟೇಯ್ನ್‌, ಇಸುರು ಉದಾನ, ಮೊಯೀನ್ ಅಲಿ, ದೇವದತ್ ಪಡಿಕ್ಕಲ್, ಗುರ್ಕೀರಾತ್ ಸಿಂಗ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಪಾರ್ಥಿವ್‌ ಪಟೇಲ್, ಪವನ್ ನೇಗಿ, ಪವನ್ ದೇಶಪಾಂಡೆ , ಶಹಬಾಜ್ ಅಹ್ಮದ್, ಶಿವಂ ದುಬೆ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಾಲ್ ಹಾಗೂ ನಿರ್ದೇಶಕರು, ತರಬೇತುದಾರರು, ವೈದ್ಯ ಸಿಬ್ಬಂದಿ ಮತ್ತಿತರರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com