ಚಹಾಲ್ ನಿಯಮಾನುಸಾರ ಆಡಿದ್ದಾರೆ, ಆದರೆ ಕಂಕಷನ್ ವಿವಾದದಿಂದ ಬೇಸರವಾಗಿದೆ: ಗವಾಸ್ಕರ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯದ ವೇಳೆ ಕಂಕಷನ್ ಕುರಿತ ವಿವಾದದಿಂದ ತಮಗೆ ಸಾಕಷ್ಟು ಆಶ್ಚರ್ಯವಾಗಿದೆ ಎಂದು ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಚಹಾಲ್-ಗವಾಸ್ಕರ್
ಚಹಾಲ್-ಗವಾಸ್ಕರ್
Updated on

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯದ ವೇಳೆ ಕಂಕಷನ್ ಕುರಿತ ವಿವಾದದಿಂದ ತಮಗೆ ಸಾಕಷ್ಟು ಆಶ್ಚರ್ಯವಾಗಿದೆ ಎಂದು ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಶುಕ್ರವಾರ ಭಾರತದ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತದ ತಂಡದ ಎಡಗೈ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಎಸೆದ ಬೌನ್ಸರ್ ಹೆಲ್ಮೆಟ್‌ ಗೆ ಬಡಿಯಿತು. ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವಾಗ ಜಡೇಜಾ ಫೀಲ್ಡಿಂಗ್‌ಗೆ ಮಾಡಲಿಲ್ಲ. ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಜಡೇಜಾ ಅವರ ಕಂಕಷನ್ ಬದಲಿಯಾಗಿ ಸೇರಿಸಿಕೊಂಡಿತು.

ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಈ ನಿರ್ಧಾರವನ್ನು ವಿರೋಧಿಸಿದರು ಮತ್ತು ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರೊಂದಿಗೆ ವಾಗ್ವಾದ ನಡೆಸಿದರು. ಆದರೆ ಚಹಾಲ್ ಅವರ ವಿರೋಧವನ್ನು ತಳ್ಳಿಹಾಕಿದ ನಂತರ ತಂಡವನ್ನು ಸೇರಲು ಅವಕಾಶ ನೀಡಲಾಯಿತು.

ಗವಾಸ್ಕರ್ ಈ ಬಗ್ಗೆ ಮಾತನಾಡುತ್ತಾ, "ಚಹಾಲ್ ಆಲ್ ರೌಂಡರ್ ಅಲ್ಲ ಎಂದು ನೀವು ವಾದಿಸಬಹುದು ಆದರೆ ಯಾವುದೇ ಬೌಲರ್ ಬ್ಯಾಟಿಂಗ್ ಮಾಡಬಲ್ಲ. ಒಂದು ರನ್ ಬಾರಿಸಲಿ ಅಥವಾ 100 ರನ್ ಗಳಿಸಿದರೂ ಅದು ಆಲ್ ರೌಂಡರ್ ಎಂದು ನಾನು ನಂಬುತ್ತೇನೆ. ಚಹಾಲ್ ಬದಲಿ ಆಟಗಾರನಾಗಿ ಆಡುವುದು ಸರಿಯಾಗಿದೆ. ಆಸ್ಟ್ರೇಲಿಯಾದ ಪಂದ್ಯದ ತೀರ್ಪುಗಾರರಿಗೆ ಇದಕ್ಕೆ ಯಾವುದೇ ಆಕ್ಷೇಪವಿರಲಿಲ್ಲ. ಈ ವಿಷಯದಲ್ಲಿ ಯಾವುದೇ ವಿವಾದದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತಲೆಗೆ ಗಾಯವಾದರೆ ತಂಡಗಳು ಬದಲಿ ಆಟಗಾರನಿಗೆ ಅವಕಾಶ ನೀಡಿರುವುದು ಗಮನಾರ್ಹ. ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 25 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದ ಚಹಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯವನ್ನು ಭಾರತ 11 ರನ್‌ಗಳಿಂದ ಗೆದ್ದುಕೊಂಡಿತು.

ಮಾಜಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ ಸಬ್‌ಸ್ಟಿಟ್ಯೂಟ್‌ಗೆ ಅವಕಾಶ ನೀಡುವುದು ಮ್ಯಾಚ್ ರೆಫರಿಯ ನಿರ್ಧಾರ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com