ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯ ನಾಳೆ: ಕ್ಲೀನ್‌ ಸ್ವೀಪ್‌ನತ್ತ ಭಾರತ ಚಿತ್ತ

ಎರಡನೇ ಪಂದ್ಯ ಗೆದ್ದು 2-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ, ಮಂಗಳವಾರ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಸಜ್ಜಾಗಿದೆ. ಉಭಯ ತಂಡಗಳ ಕಾದಾಟಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಸಿಡ್ನಿ: ಎರಡನೇ ಪಂದ್ಯ ಗೆದ್ದು 2-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ, ಮಂಗಳವಾರ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಸಜ್ಜಾಗಿದೆ. ಉಭಯ ತಂಡಗಳ ಕಾದಾಟಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. 

ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 194 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್‌ ಪಾಂಡ್ಯ 22 ಎಸೆತಗಳಲ್ಲಿ 42 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶಿಖರ್‌ ಧವನ್‌ 36 ಎಸೆತಗಳಲ್ಲಿ 52 ರನ್‌ ಗಳಿಸಿದ್ದರೆ, ಕೊಹ್ಲಿ 40 ರನ್‌ ಗಳಿಸಿದ್ದರು. 

ಭಾರತದ ಪರ ದೀಪಕ್‌ ಚಹರ್‌ ಹಾಗೂ ಯುಜ್ವೇಂದ್ರ ಚಹಲ್‌ ದುಬಾರಿಯಾದರೆ, ಟಿ ನಟರಾಜನ್‌ ನಾಲ್ಕು ಓವರ್‌ಗಳಿಗೆ 20 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಕಿತ್ತು ಮತ್ತೊಂದು ಅದ್ಭುತ ಸ್ಪೆಲ್‌ ಪೂರ್ಣಗೊಳಿಸಿದ್ದರು. 

ಕಳೆದ ಪಂದ್ಯಕ್ಕೆ ಗಾಯದಿಂದಾಗಿ ಆರೋನ್‌ ಫಿಂಚ್‌ ಅಲಭ್ಯತೆಯಿಂದ, ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ತಂಡದ ನಾಯಕತ್ವ ವಹಿಸಿಕೊಂಡಿದ್ದ ಮ್ಯಾಥ್ಯೂ ವೇಡ್‌ ಕೇವಲ 32 ಎಸೆತಗಳಲ್ಲಿ 58 ರನ್‌ಗಳನ್ನು ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾ 195 ರನ್‌ಗಳ ಗುರಿಯನ್ನು ಭಾರತಕ್ಕೆ ನೀಡಿತ್ತು. ಆರೋನ್‌ ಫಿಂಚ್‌ಮ ಪ್ಯಾಟ್‌ ಕಮಿನ್ಸ್, ಡೇವಿಡ್‌ ವಾರ್ನರ್‌, ಮಿಚೆಲ್‌ ಸ್ಟಾರ್ಕ್‌ ಹಾಗೂ ಜಾಶ್‌ ಹೇಜಲ್‌ವುಡ್‌ ವಿಭಿನ್ನ ಕಾರಣಗಳಿಂದ ಎರಡನೇ ಪಂದ್ಯದಲ್ಲಿ ಆಡದೇ ಇದದ್ದು ಆತಿಥೇಯರರಿಗೆ ಲಾಭವಾಗಿತ್ತು. 

ವಾತಾವರಣ-ಪಿಚ್‌ ರಿಪೋರ್ಟ್: ಪಂದ್ಯದ ದಿನವಾದ ಮಂಗಳವಾರ ಸಿಡ್ನಿಯಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಪಂದ್ಯದ ವೇಳೆ ಶೇ. 20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರಲಿದೆ. ಮಳೆ ಬರುವ ಸಾಧ್ಯತೆ ಇಲ್ಲ. ಈ ಪ್ರವಾಸದಲ್ಲಿ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದ ವಿಕೆಟ್‌ ಬ್ಯಾಟಿಂಗ್‌ಗೆ ಸ್ನೇಹಯುತವಾಗಿದೆ. ಸ್ಪಿನ್‌ ಓವರ್‌ಗಳು ಪಂದ್ಯದಲ್ಲಿ ನಿರ್ಣಾಯಕವಾಗಲಿದೆ. ಎರಡನೇ ಹಣಾಹಣಿಯಂತೆ ಮಂಗಳವಾರವೂ ದೊಡ್ಡ ಮೊತ್ತದ ಪಂದ್ಯವಾಗಲಿದೆ. 

ತಂಡಗಳ ಸಂಭಾವ್ಯ ಇಲೆವೆನ್‌
ಭಾರತ: ಕೆ.ಎಲ್‌ ರಾಹುಲ್‌ (ವಿ.ಕೀ), ಶಿಖರ್ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಟಿ ನಟರಾಜನ್‌, ಯುಜ್ವೇಂದ್ರ ಚಹಲ್‌, ಜಸ್‌ಪ್ರಿತ್‌ ಬುಮ್ರಾ/ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌.

ಆಸ್ಟ್ರೇಲಿಯಾ: ಡಿ'ಆರ್ಸಿ ಶಾರ್ಟ್/ಅಲೆಕ್ಸ್ ಕೇರಿ, ಮ್ಯಾಥ್ಯೂ ವೇಡ್‌(ವಿ.ಕೀ-ನಾಯಕ), ಸ್ಟೀವನ್‌ ಸ್ಮಿತ್‌, ಮೊಯ್ಸೆಸ್‌ ಹೆನ್ರಿಕ್ಸ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಮಿಚೆಲ್‌ ಸ್ವೆಪ್ಸನ್‌, ಶಾನ್‌ ಅಬಾಟ್‌, ಡೇನಿಯಲ್‌ ಸ್ಯಾಮ್ಸ್, ಆಂಡ್ರೆ ಟೈ ಹಾಗೂ ಆಡಮ್ ಝಾಂಪ.

ಪಂದ್ಯದ ವಿವರ 
ಭಾರತ vs ಆಸ್ಟ್ರೇಲಿಯಾ 
ದಿನಾಂಕ: ಡಿ.8, 2020 (ಮಂಗಳವಾರ)
ಸಮಯ: ಮಧ್ಯಾಹ್ನ 1: 40 (ಭಾರತೀಯ ಕಾಲಮಾನ)
ಸ್ಥಳ: ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣ, ಸಿಡ್ನಿ
ನೇರ ಪ್ರಸಾರ: ಸೋನಿ ಸಿಕ್ಸ್ ನೆಟ್‌ವರ್ಕ್ಸ್
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com