ಮೋಸದಾಟಕ್ಕೆ ಶುಭ್ಮನ್ ಗಿಲ್ ಬಲಿ? ವಿವಾದ ಸೃಷ್ಟಿಸಿದ ಅಂಪೈರ್ ತೀರ್ಮಾನ, ವಿಡಿಯೋ ವೈರಲ್!

ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಶುಭ್ಮನ್ ಗಿಲ್ ಔಟ್ ವಿವಾದ ಸೃಷ್ಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಡ್ನಿ: ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಶುಭ್ಮನ್ ಗಿಲ್ ಔಟ್ ವಿವಾದ ಸೃಷ್ಟಿಸಿದೆ.

ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 194 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಎ 108 ರನ್ ಗಳಿಗೆ ಸರ್ವ ಪತನಗೊಂಡಿತ್ತು. 86 ರನ್ ಗಳ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಪರ 386 ರನ್ ಪೇರಿಸಿತ್ತು. ಇದರೊಂದಿಗೆ ಭಾರತ ಆಸ್ಟ್ರೇಲಿಯಾ ಎ ತಂಡಕ್ಕೆ 473 ರನ್ ಟಾರ್ಗೆಟ್ ನೀಡಿತ್ತು. 

ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಶುಭ್ಮನ್ ಗಿಲ್ 65 ರನ್ ಗಳಿಸಿದ್ದಾಗ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪೋಸ್ನ್ ಬೌಲಿಂಗ್ ನಲ್ಲಿ ಔಟ್ ಆದರು. ಆದರೆ ಗಿಲ್ ಔಟ್ ಪ್ರಮಾಣಿಕವಾಗಿತ್ತಾ ಎಂಬ ಪ್ರಶ್ನೆಗಳು ಎಬ್ಬಿಸಿದೆ. 

ಮಿಚೆಲ್ ಎಸೆದ ಚೆಂಡು ಗಿಲ್ ಅವರ ಪ್ಯಾಡ್ ಗೆ ತಗುಲಿ ಸ್ಲಿಪ್ ನಲ್ಲಿದ್ದ ಅಬಾಟ್ ಕೈ ಸೇರಿತ್ತು. ಚೆಂಡು ಅಬಾಟ್ ಕೈ ಸೇರುವ ಮುನ್ನ ಎಲ್ ಬಿಡಬ್ಲ್ಯೂಗೆ ಅಪೀಲ್ ಮಾಡಿದರು. ಆದರೆ ಚೆಂಡು ವಿಕೆಟ್ ಗಿಂತ ಸಾಕಷ್ಟು ಮೇಲಿದ್ದ ಕಾರಣ ಅಂಪೈರ್ ಔಟ್ ಕೊಡಲಿಲ್ಲ. ಇದರ ಬೆನ್ನಲ್ಲೆ ಕ್ಯಾಚ್ ಹಿಡಿದ ಕಾರಣ ಔಟ್ ಎಂದು ತೀರ್ಮಾನಿಸಿ ಆಸೀಸ್ ಆಟಗಾರರು ಸಂಭ್ರಮದಲ್ಲಿ ತೊಡಗಿದರು. 

ಚೆಂಡು ಅಬಾಟ್ ಕೈಸೇರಿದ್ದು ನಿಜ. ಆದರೆ ಚೆಂಡು ಬ್ಯಾಟ್ ಗೆ ತಗುಲಿದೆ ಎಂಬುದಕ್ಕೆ ಎಲ್ಲಿಯೂ ಸಾಕ್ಷ್ಯಾ ಇಲ್ಲ. ಇದನ್ನೇ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಶ್ನೆ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳು ಟ್ವೀಟ್ ಮಾಡಿ ಇದು ಮೋಸದಾಟ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com