ಮಾನಸಿಕ ಹಿಂಸೆ... ಪಿಸಿಬಿಯೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮೊಹಮ್ಮದ್ ಅಮೀರ್ ವಿದಾಯ!

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹಾಲಿ ನಿರ್ವಹಣಾ ಮಂಡಳಿಯೊಂದಿಗೆ ಕೆಲಸ ನಿರ್ವಹಿಸುವುದು ಸಾಧ್ಯವಿಲ್ಲ. ಅದೊಂದು ಮಾನಸಿಕ ಹಿಂಸೆ ಎಂಬ ಗಂಭೀರ ಆರೋಪ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಮೊಹಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ  ಮಾಡಿದ್ದಾರೆ.
ಮೊಹಮದ್ ಅಮೀರ್
ಮೊಹಮದ್ ಅಮೀರ್

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹಾಲಿ ನಿರ್ವಹಣಾ ಮಂಡಳಿಯೊಂದಿಗೆ ಕೆಲಸ ನಿರ್ವಹಿಸುವುದು ಸಾಧ್ಯವಿಲ್ಲ. ಅದೊಂದು ಮಾನಸಿಕ ಹಿಂಸೆ ಎಂಬ ಗಂಭೀರ ಆರೋಪ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಮೊಹಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ  ಮಾಡಿದ್ದಾರೆ.

ಹೌದು.. ಪಾಕಿಸ್ತಾನ ಕ್ರಿಕೆಟ್‌ನ ವೇಗದ ಬೌಲರ್ ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದು, ತಮ್ಮ ಈ ದಿಢೀರ್ ನಿರ್ಧಾರಕ್ಕೆ ಪಿಸಿಬಿ ಕಾರಣ ಎಂದು ಪರೋಕ್ಷವಾಗಿ ಪಿಸಿಬಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹಾಲಿ ನಿರ್ವಹಣಾ  ಮಂಡಳಿಯೊಂದಿಗೆ ಕೆಲಸ ನಿರ್ವಹಿಸುವುದು ಸಾಧ್ಯವಿಲ್ಲ. ಅದೊಂದು ಮಾನಸಿಕ ಹಿಂಸೆ ಎಂದು ಹೇಳಿರುವ ಅಮೀರ್ ಈ ಕುರಿತಂತೆ ಮುಂದಿನ ದಿನಗಳಲ್ಲಿ ಸುಧೀರ್ಘ ಹೇಳಿಕೆ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ.

ಇನ್ನು ಕೇವಲ 28 ವರ್ಷದ ಮೊಹಮದ್ ಅಮೀರ್ ಇಷ್ಟು ಚಿಕ್ಕವಯಸ್ಸಿಗೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿ ಕ್ರಿಕೆಟ್ ರಂಗದಲ್ಲಿ ಅಚ್ಚರಿಗೆ ಕಾರಣರಾಗಿದ್ದಾರೆ. ಈ ಹಿಂದೆ ಅಂದರೆ ಕಳೆದ ವರ್ಷ ಅತಿಯಾದ ಕ್ರಿಕೆಟ್‌ನ ಕಾರಣವನ್ನು ನೀಡಿ ಟೆಸ್ಟ್‌ ಮಾದರಿಗೆ ವಿದಾಯ ಹೇಳಿದ್ದ ಅಮೀರ್ ವ್ಯಾಪಕ  ಟೀಕೆಗೆ ಗುರಿಯಾಗಿದ್ದರು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸೀಮಿತ ಓವರ್‌ಗಳ ಮಾದರಿಗೂ ಅಮೀರ್ ನಿವೃತ್ತಿಯನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಅನುಭವಿ ವೆಗಿಯಾಗಿರುವ ಮೊಹಮ್ಮದ್ ಅಮಿರ್ ಅವರನ್ನು ಕೈಬಿಡಲಾಗಿತ್ತು. ಅದಾದ ಬಳಿಕ ಈಗ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 2009ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ  ಕ್ರಿಕೆಟ್ ವೃತ್ತಿ ಜೀವನವನ್ನು ಆರಂಬಿಸಿದ್ಧರು. ಇಲ್ಲಿಯವರೆಗೆ ಮೂರು ಮಾದರಿಯಲ್ಲಿ 147 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಮಿರ್ 259 ವಿಕೆಟ್ ಪಡೆದಿದ್ದಾರೆ.

2009ರಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಮೊಹಮದ್ ಅಮಿರ್ ಕೂಡ ಭಾಗವಾಗಿದ್ದರು. ಆದರೆ ಅದಾದ ಬಳಿಕ ಮೊಹಮ್ಮದ್ ಅಮಿರ್ ಕ್ರಿಕೆಟ್ ವೃತ್ತಿ ಜೀವನ ಇಳಿಮುಖವನ್ನು ಕಂಡಿತ್ತು. 2010ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅಮಿರ್ ಭಾಗಿಯಾಗಿರುವುದು  ಸಾಭೀತಾಗಿತ್ತು.  ಇದು ಅಮಿರ್ ಜೀವನದ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ಇದಕ್ಕಾಗಿ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅವರು ನಿಷೇಧಕ್ಕೂ ಒಳಗಾಗಿದ್ದರು. ನಿಷೇಧ ಅಂತ್ಯವಾದ ಬಳಿಕ ಮತ್ತೆ ಪಾಕಿಸ್ತಾನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡರು. 

2017ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾದರು. ಅದಾದ ಬಳಿಕ ಅತಿಯಾದ ಕ್ರಿಕೆಟ್‌ನ ಕಾರಣವನ್ನು ಮುಂದಿಟ್ಟು ಟೆಸ್ಟ್ ಕ್ರಿಕೆಟ್‌ಗೆ 2019ರಲ್ಲಿ ಆಮಿರ್ ನಿವೃತ್ತಿ ಘೋಷಿಸಿದರು. ಈಗ ಟಿ20 ಹಾಗೂ ಏಕದಿನ ಮಾದರಿಗೂ ಅವರು ವಿದಾಯ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com