ಪೃಥ್ವಿ ಶಾ, ರವಿಶಾಸ್ತ್ರಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು

ಇದೀಗ ಪೃಥ್ವಿ ಶಾ ಹಾಗೂ ಕೋಚ್‌ ರವಿಶಾಸ್ತ್ರಿ ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ  ಟ್ರೋಲ್‌ ಮಾಡಿದ್ದಾರೆ.
ಪೃಥ್ವಿ ಶಾ, ರವಿಶಾಸ್ತ್ರಿ
ಪೃಥ್ವಿ ಶಾ, ರವಿಶಾಸ್ತ್ರಿ
Updated on

ಅಡಿಲೇಡ್‌:  ಪೃಥ್ವಿ ಶಾ ಹಾಗೂ ಕೋಚ್‌ ರವಿಶಾಸ್ತ್ರಿ ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ  ಟ್ರೋಲ್‌ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ವೈಫಲ್ಯ ಅನುಭವಿಸಿದರು. ಮೊದಲನೇ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ ಗಳಿಸಿ ಪ್ಯಾಟ್‌ ಕಮಿನ್ಸ್‌ಗೆ ಕ್ಲೀನ್‌ ಬೌಲ್ಡ್ ಆಗಿದ್ದರು. 

ಅದ್ಭುತ ಫಾರ್ಮ್‌ನಲ್ಲಿದ್ದ ಕೆ.ಎಲ್‌ ರಾಹುಲ್‌ ಹಾಗೂ ಶುಭಮನ್‌ ಗಿಲ್‌ ಅವರ ಬದಲು ಪೃಥ್ವಿ ಶಾ ಅವರನ್ನು ಅಂತಿಮ 11ಕ್ಕೆ ಆಯ್ಕೆ ಮಾಡಿದ ರವಿಶಾಸ್ತ್ರಿ ಅವರ ಕ್ರಮವನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಟೀಮ್‌ ಮ್ಯಾನೇಜ್‌ಮೆಂಟ್‌ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ 21 ರ ಪ್ರಾಯದ ಆಟಗಾರ ವಿಫಲರಾದರು. 

ಡಿ.16ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಅಂತಿಮ 11 ಆಯ್ಕೆ ಮಾಡಿದಾಗಿನಿಂದಲೂ ಪೃಥ್ವಿ ಶಾ ಹಾಗೂ ಶುಭಮನ್‌ ಗಿಲ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು. ಎರಡೂ ಇನಿಂಗ್ಸ್‌ಗಳಲ್ಲಿ ಪೃಥ್ವಿ ಶಾ ವೈಫಲ್ಯ ಅನುಭವಿಸಿದ ಕಾರಣ, ಇದೀಗ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿ ಅವರನ್ನು ಸೇರಿಸಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. 

ಮೊದಲನೇ ಇನಿಂಗ್ಸ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ಬ್ಯಾಟ್‌ ಹಾಗೂ ಪ್ಯಾಡ್‌ ಮಧ್ಯೆ ಚೆಂಡನ್ನು ಬಿಟ್ಟುಕೊಂಡು ಕ್ಲೀನ್‌ ಬೌಲ್ಡ್ ಆಗಿದ್ದ ಪೃಥ್ವಿ ಶಾ, ಎರಡನೇ ಇನಿಂಗ್ಸ್‌ನಲ್ಲಿಯೂ ಅದೇ ತಪ್ಪನ್ನು ಮಾಡಿದರು. ಪ್ಯಾಟ್‌ ಕಮಿನ್ಸ್ ಎಸೆತದಲ್ಲಿ ಬ್ಯಾಟ್‌ ಹಾಗೂ ಪ್ಯಾಡ್‌ ಮಧ್ಯೆ ಚೆಂಡನ್ನು ಬಿಟ್ಟುಕೊಂಡು ಕ್ಲೀನ್‌ ಬೌಲ್ಡ್ ಆದರು. 

ಪೃಥ್ವಿ ಶಾ ಕ್ಲೀನ್‌ ಬೌಲ್ಡ್ ಆದ ಕೆಲವೇ ನಿಮಿಷಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌, 21 ರ ಪ್ರಾಯದ ಆಟಗಾರನ ಬ್ಯಾಟ್‌ ಹಾಗೂ ಪ್ಯಾಡ್‌ ಮಧ್ಯೆ ಅಂತರ ಎದ್ದು ಕಾಣುತ್ತಿದೆ, ಈ ಜಾಗದಲ್ಲಿ ಆತನಿಗೆ ಗಂಭೀರ ಸಮಸ್ಯೆ ಇದೆ ಎಂದು ಹೇಳಿದ್ದರು. 

ಪೃಥ್ವಿ ಶಾ ಅವರು ಈಗಾಗಲೇ ಅಭಿಮಾನಿಗಳಿಂದ ಸಿಕ್ಕಾ ಪಟ್ಟೆ ಟ್ರೋಲ್‌ ಆಗಿದ್ದಾರೆ. ಪೃಥ್ವಿ ಶಾ ಬಗ್ಗೆ 2018ರಲ್ಲಿ ರವಿಶಾಸ್ತ್ರಿ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಅಭಿಮಾನಿಗಳು ಇದೀಗ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಅನ್ನು ಟ್ರೋಲ್‌ ಮಾಡುತ್ತಿದ್ದಾರೆ. 

2018ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪೃಥ್ವಿ ಶಾ ಅವರನ್ನು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಸಲಾಗಿತ್ತು. ಅದರಂತೆ ಆ ಸರಣಿಯಲ್ಲಿ ಶಾ ಅದ್ಭುತ ಬ್ಯಾಟಿಂಗ್‌ ಮಾಡಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 
ನಂತರ, ಸಂದರ್ಶನವೊಂದರಲ್ಲಿ ಪೃಥ್ವಿ ಶಾ ಬ್ಯಾಟಿಂಗ್‌ ಬಗ್ಗೆ ಪ್ರತಿಕ್ರಿಯಿಸಿದ್ದ ರವಿ ಶಾಸ್ತ್ರಿ, "ಮೊದಲು ಅವರ(ಪೃಥ್ವಿ ಶಾ)ನ್ನು ನೋಡಿದಾಗ ಸಚಿನ್‌ ತೆಂಡೂಲ್ಕರ್‌ ಅವರನ್ನು ನೆನಪು ಮಾಡಿಸಿದರು ಹಾಗೂ ಸ್ವಲ್ಪ ವಿರೇಂದ್ರ ಸೆಹ್ವಾಗ್‌ ರೀತಿಯೂ ಕಂಡಿದ್ದರು. ಅವರು ನಡೆದುಕೊಂಡು ಬರುತ್ತಿದ್ದರೆ ಸ್ವಲ್ಪ ಲಾರಾ ರೀತಿಯೇ ಹೋಲುತ್ತಿದ್ದರು," ಎಂದು 2018ರಲ್ಲಿ ಯುವ ಬ್ಯಾಟ್ಸ್‌ಮನ್‌ ಅನ್ನು ರವಿಶಾಸ್ತ್ರಿ ಗುಣಗಾನ ಮಾಡಿದ್ದರು. 

ಸಚಿನ್‌, ಸೆಹ್ವಾಗ್‌ ಹಾಗೂ ಲಾರಾ ಸೇರಿದಂತೆ ಕ್ರಿಕೆಟ್‌ ದಿಗ್ಗಜರಿಗೆ ಪೃಥ್ವಿ ಶಾ ಅವರನ್ನು ಹೋಲಿಕೆ ಮಾಡಿದ್ದ ರವಿಶಾಸ್ತ್ರಿ ಅವರನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com