ಬಾಕ್ಸಿಂಗ್ ಡೇ ಟೆಸ್ಟ್: ಮೆಲ್ಬೊರ್ನ್ ಕ್ರೀಡಾಂಗಣದಲ್ಲಿ ನಲ್ಲಿ ಟೀಮ್ ಇಂಡಿಯಾದ ಸಾಧನೆ ಹೇಗಿದೆ!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೇಲೆ ಕಣ್ಣು ನೆಟ್ಟಿದೆ. ಈ ಪಂದ್ಯದಲ್ಲಿ ಗೆದ್ದು, ಸರಣಿಯಲ್ಲಿ ಪುಟಿದೇಳುವ ಕನಸನ್ನು ಟೀಮ್ ಇಂಡಿಯಾ ಹಾಕಿಕೊಂಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೇಲೆ ಕಣ್ಣು ನೆಟ್ಟಿದೆ. ಈ ಪಂದ್ಯದಲ್ಲಿ ಗೆದ್ದು, ಸರಣಿಯಲ್ಲಿ ಪುಟಿದೇಳುವ ಕನಸನ್ನು ಟೀಮ್ ಇಂಡಿಯಾ ಹಾಕಿಕೊಂಡಿದೆ. 

ಹಾಗಿದ್ದರೆ, ಟೀಮ್ ಇಂಡಿಯಾದ ಸಾಧನೆ ಮೆಲ್ಬೋರ್ನ್ ಅಂಗಳದಲ್ಲಿ ಹೇಗಿದೆ ಎಂಬುದರ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಅಂಗಳದಲ್ಲಿ ಉಭಯ ತಂಡಗಳು ಈ ವರೆಗೆ 8 ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ, ಆತಿಥೇಯ ತಂಡ ಐದು ಬಾರಿ ಜಯ ದಾಖಲಿಸಿದೆ. ಉಳಿದ ಎರಡು ಪಂದ್ಯ ಡ್ರಾ ಆಗಿದೆ. 

ಇದೇ ಅಂಗಳದಲ್ಲಿ ಭಾರತದ ಪರ ಐವರು ಆಟಗಾರರು ಮೂರಂಕಿ ಮುಟ್ಟಿದ್ದಾರೆ. ಈ ಪಟ್ಟಿಯಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿ ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಕಾಣಿಸಿಕೊಳ್ಳುತ್ತಾರೆ. ಇವರು ಆಸ್ಟ್ರೇಲಿಯಾ ವಿರುದ್ಧ 2003/04 ರಲ್ಲಿ 195 ರನ್ ಬಾರಿಸಿದ್ದರು. ಈ ಅಂಗಳದಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು 1999/00 ರಲ್ಲಿ ಕಂಗರೂ ತಂಡದ ವಿರುದ್ಧ 116 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. 

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 2014ರ ಪ್ರವಾಸದಲ್ಲಿ 169 ಸಿಡಿಸಿ ತಮ್ಮ ಕ್ಷಮತೆ ಸಾಬೀತು ಮಾಡಿದ್ದರು. ಇದೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಸಹ 147 ರನ್ ಕಲೆ ಹಾಕಿದ್ದರು. ಕಳೆದ ಪ್ರವಾಸದಲ್ಲಿ ಚೇತೇಶ್ವರ್ ಪೂಜಾರ 106 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. 

ಈ ಅಂಗಳದಲ್ಲಿ ಟೀಮ್ ಇಂಡಿಯಾದ ಬೌಲರ್ ಗಳು ಸಹ ಕಮಾಲ್ ಪ್ರದರ್ಶನ ನೀಡಿದ್ದಾರೆ. ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಕಳೆದ ಪ್ರವಾಸದ ವೇಳೆ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ಬುಮ್ರಾ ಒಟ್ಟು 9 ವಿಕೆಟ್ ಗಳನ್ನು ಕಬಳಿಸಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಆರು ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದರು. ಇವರಿಗೆ ಎರಡೂ ಇನ್ನಿಂಗ್ಸ್ ಗಳಲ್ಲೂ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದ್ದರು.  ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಮನಮೋಹಕ ಪ್ರದರ್ಶನ ನೀಡಿ ಪುಟಿದೇಳುವ ವಿಶ್ವಾಸ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com