ಸಿಎಬಿ ಅಧ್ಯಕ್ಷರಾದ ದಿವಂಗತ ಜಗಮೋಹನ್ ದಾಲ್ಮಿಯಾ ಪುತ್ರ ಅವಿಷೇಕ್ 

ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ನೂತನ ಅಧ್ಯಕ್ಷರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಶೇಕ್ ದಾಲ್ಮಿಯಾ ಅವರು ಆಯ್ಕೆಯಾಗಿದ್ದಾರೆ. 
ಸಿಎಬಿ ಅಧ್ಯಕ್ಷರಾದ ದಿವಂಗ ಜಗಮೋಹನ್ ದಾಲ್ಮಿಯಾ ಪುತ್ರ ಅವಿಷೇಕ್
ಸಿಎಬಿ ಅಧ್ಯಕ್ಷರಾದ ದಿವಂಗ ಜಗಮೋಹನ್ ದಾಲ್ಮಿಯಾ ಪುತ್ರ ಅವಿಷೇಕ್

ನವದೆಹಲಿ: ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ನೂತನ ಅಧ್ಯಕ್ಷರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಶೇಕ್ ದಾಲ್ಮಿಯಾ ಅವರು ಆಯ್ಕೆಯಾಗಿದ್ದಾರೆ. 

ಅವಿಶೇಕ್ ದಾಲ್ಮಿಯಾ ತಮ್ಮ 38ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಸಿಎಬಿ ಮುಖ್ಯಸ್ಥರಾಗಿದ್ದಾರೆ. ಇದರಂತೆ ಸೌರವ್ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿಯವರು ಸಿಎಬಿಯ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 

ಸೌರವ್ ಗಂಗೂಲಿ ಜೊತೆಗೂಡಿ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜಿಸುವಲ್ಲಿ ಅವಿಶೇಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವಿಶೇಕ್ ಅವರು 2012-13ರಲ್ಲಿ ಭಾರತೀಯ ಫುಟ್ಬಾಲ್ ಅಸೋಸಿಯೇಶನ್ ನ ಆಡಳಿತ ಮಂಡಳಿಯ ಸದಸ್ಯರಾದ ನಂತರ ಕ್ರೀಡಾ ಆಡಳಿತಕ್ಕೆ ಪ್ರವೇಶ ಮಾಡಿದ್ದರು. 

ಅವರ ತಂದೆ ಜಗಮೋಹನ್ ದಾಲ್ಮಿಯಾ ಅವರನ್ನು ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಭಾರೀ ಬದಲಾವಣೆಗಳನ್ನು ತಂದ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಜಗಮೋಹನ್ ದಾಲ್ಮಿಯಾ 1979ರಲ್ಲಿ ಬಂಗಾಳದ ಕ್ರಿಕೆಟ್ ಸಂಘದ ಪ್ರತಿನಿಧಿಯಾಗಿ ಬಿಸಿಸಿಐಗೆ ಸೇರ್ಪಡೆಗೊಂಡರು ಮತ್ತು 1983ರಲ್ಲಿ ಬಿಸಿಸಿಐ ಸಂಸ್ಥೆ ಖಚಾಂಚಿಯಾದರು. 

ನಾನು ಚಿಕ್ಕವನಿದ್ದಾಗಿನಿಂದಲೂ ನನ್ನ ತಂದೆ ಈಡನ್ ಗಾರ್ಡನ್ ಪ್ರಾರ್ಥನಾ ಮಂದಿರ ಎಂದು ಹೇಳುತ್ತಿದ್ದರು. ಈ ಭಾವನೆ ನನ್ನಲ್ಲೂ ಬೆಳೆದಿದೆ ಎಂದು ಅವಿಶೇಕ್ ಹೇಳಿದ್ದಾರೆ. 

ಈಡನ್ ಗಾರ್ಡನ್ ಬಗ್ಗೆ ಸಾಕಷ್ಟು ಭಾವನೆಗಳನ್ನು ಹೊಂದಿದ್ದರು. ಇದೀಗ ತಂದೆಯಿದ್ದ ಕೊಠಡಿಯಲ್ಲಿ ಕುಳಿತುಕೊಳ್ಳಲು ಭಾವುಕನಾಗುವಂತಾಗುತ್ತಿದೆ. ಯಾವುದೇ ಮಾಜಿ ಸಿಎಬಿ ಅಧ್ಯಕ್ಷರೊಂದಿಗೆ ಹೋಲಿಕೆ ಮಾಡಿದರೆ ಅದು ಮೂರ್ಖತನವಾಗುತ್ತದೆ. ಪ್ರತಿಯೊಬ್ಬರು ವಿಭಿನ್ನತೆಯನ್ನು ಹೊಂದಿದ್ದವರಾಗಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com