ನನ್ನನ್ನೇ ನನಗೆ ನೆನಪಿಸಿದ ಮಾರ್ನಸ್ ಲ್ಯಾಬುಸ್ಚಾಗ್ನೆ: ಸಚಿನ್ ತೆಂಡೂಲ್ಕರ್

ಹಾಲಿ ಕ್ರಿಕೆಟಿಗರಲ್ಲಿ ಆಸ್ಟ್ಪೇಲಿಯಾದ ಸ್ಟಾರ್ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ ನನ್ನನ್ನೇ ನನಗೆ ನೆನಪಿಸಿದ ಆಟಗಾರ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸಿಡ್ನಿ: ಹಾಲಿ ಕ್ರಿಕೆಟಿಗರಲ್ಲಿ ಆಸ್ಟ್ಪೇಲಿಯಾದ ಸ್ಟಾರ್ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ ನನ್ನನ್ನೇ ನನಗೆ ನೆನಪಿಸಿದ ಆಟಗಾರ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಬುಶ್‌ಫೈರ್ ಸಂತ್ರಸ್ತರ ನಿಧಿಗಾಗಿ ಸಹಾಯಾರ್ಥ ಪಂದ್ಯವೊಂದನ್ನು ಆಯೋಜಿಸಲಾಗಿದ್ದು, ಈ ಸಂಬಂಧ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರುವ ಸಚಿನ್, ಆಸ್ಟ್ರೇಲಿಯಾದ ಯುವ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಹೌದು.. ಆಸಿಸ್ ಸ್ಟಾರ್ ಬ್ಯಾಟ್ಸ್ ಮನ್ ಮಾರ್ನಸ್ ಬ್ಯಾಟಿಂಗ್ ಕೌಶಲ್ಯಕ್ಕೆ ಸ್ವತ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬೆರಗಾಗಿದ್ದು, ಮಾರ್ನಸ್ ಬ್ಯಾಟಿಂಗ್‌ನಲ್ಲಿ ತಮ್ಮನ್ನು ನೆನಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

'ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಎರಡು ಪಂದ್ಯವನ್ನು ವೀಕ್ಷಿಸಿದ್ದೆ. ಸ್ಟೀವ್ ಸ್ಮಿತ್ ಔಟ್ ಆದಾಗ ಲ್ಯಾಬುಸ್ಚಾಗ್ನೆ ಎರಡನೇ ಇನ್ನಿಂಗ್ಸ್ ನೋಡಿದ್ದೇನೆ. ನಾನು ಮಾವನೊಂದಿಗೆ ಕುಳಿತುಕೊಂಡು ಪಂದ್ಯ ನೋಡುತ್ತಿದ್ದೆ. ಜೋಫ್ರಾ ಆರ್ಚರ್ ಎರಡನೇ ಎಸೆತವನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ ದಂಡಿಸಿದರು. ಅಲ್ಲಿಂದ ಬಳಿಕ 15 ನಿಮಿಷಗಳಷ್ಟು ಕಾಲ ಬ್ಯಾಟಿಂಗ್ ವೀಕ್ಷಿಸಿದ ನಾನು, ಈ ಆಟಗಾರನಾಗಿ ಏನೋ ವಿಶೇಷವಿದೆ ಎಂದು ಮನಗಂಡಿದ್ದೇನೆ'.

'ಮಾರ್ನಸ್ ಲ್ಯಾಬುಸ್ಚಾಗ್ನೆ ಅವರಲ್ಲಿ ಏನೋ ವಿಶೇಷವಿದೆ. ಅವರ ಫುಟ್‌ವರ್ಕ್ ಅದ್ಭುತ. ಫುಟ್ವರ್ಕ್ ದೈಹಿಕವಲ್ಲ, ಮಾನಸಿಕವಾಗಿದೆ. ನಿಮ್ಮ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತನೆ ಮಾಡದೇ ಇರುವುದರ ಹೊರತಾಗಿ ಕಾಲನ್ನು ಚಲಿಸಲು ಸಾಧ್ಯವಿಲ್ಲ. ಮಾನಸಿಕವಾಗಿ ಬಲಿಷ್ಠರಾಗದಿದ್ದರೆ ಅಷ್ಟು ಸಲಿಸಾಗಿ ಕಾಲು ಚಲಿಸುವುದಿಲ್ಲ. ಮಾರ್ನಸ್ ಲ್ಯಾಬುಶಾನೆ ಫೂಟ್‌ವರ್ಕ್ ಅದ್ಬುತವಾಗಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಸಮಕಾಲೀನ ಶ್ರೇಷ್ಠ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ನಡುವೆ ಹೋಲಿಕೆ ಮಾಡಲು ಸಚಿನ್ ತೆಂಡೂಲ್ಕರ್ ನಿರಾಕರಿಸಿದರು. ನಾನು ಆಡುತ್ತಿರುವ ಕಾಲಘಟ್ಟದಲ್ಲೂ ಇದನ್ನೇ ಮಾಡುತ್ತಿದ್ದರು. ಆಟಗಾರರನ್ನು ಅವರಷ್ಟಕ್ಕೆ ಬಿಟ್ಟು ಬಿಡಲು ಸಚಿನ್ ವಿನಂತಿ ಮಾಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com