'ಪ್ರಯೋಗ ಪರೀಕ್ಷೆ ಬೇಡ', ಎರಡನೇ ಪಂದ್ಯಕ್ಕೆ ಚಾಹಲ್, ಕುಲ್ದೀಪ್ ಇಬ್ಬರನ್ನೂ ಆಡಿಸಿ: ಹರಭಜನ್ ಸಿಂಗ್

ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್‌ ಸ್ಪಿನ್ನರ್‌ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ಚಹಾಲ್-ಕುಲದೀಪ್
ಚಹಾಲ್-ಕುಲದೀಪ್
Updated on: 

ಆಕ್ಲೆಂಡ್: ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್‌ ಸ್ಪಿನ್ನರ್‌ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.

ಕಳೆದ ಬುಧವಾರ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 348 ರನ್ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ತಂಡ ರಾಸ್ ಟೇಲರ್ ಶತಕದ ನೆರವಿನಿಂದ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಸೋಲಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.

ಅಂದಿನ ಪಂದ್ಯದಲ್ಲಿ ಯಜ್ವೇಂದ್ರ ಚಾಹಲ್ ಕಣಕ್ಕೆ ಇಳಿದಿರಲಿಲ್ಲ. ಕುಲ್ದಿಪ್‌ ಎರಡು ವಿಕೆಟ್‌ ಪಡೆದಿದ್ದರು. ಆದರೆ, 84 ರನ್ ಬಿಟ್ಟುಕೊಟ್ಟಿದ್ದರು. ಭಾರತದ ಬೌಲರ್‌ಗಳ ಪೈಕಿ ಕುಲ್ದೀಪ್‌ ಅತ್ಯಂತ ದುಬಾರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com