ಪೃಥ್ವಿ ಶಾ ಅಲಕ್ಷ್ಯದ ರನೌಟ್, ಯುವ ಬ್ಯಾಟ್ಸ್‌ಮನ್‌ ಫಿಟ್ನೆಸ್ ಬಗ್ಗೆ ಪ್ರಶ್ನಿಸಿದ ಚೋಪ್ರಾ, ವಿಡಿಯೋ!

ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮುಖಭಂಗವನ್ನು ಅನುಭವಿಸಿದ್ದು ಇದರ ನಡುವೆ ಯುವ ಪ್ರತಿಭನೆ ಪೃಥ್ವಿ ಶಾ ಅಲಕ್ಷ್ಯದ ರನೌಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಪೃಥ್ವಿ ಶಾ
ಪೃಥ್ವಿ ಶಾ
Updated on

ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮುಖಭಂಗವನ್ನು ಅನುಭವಿಸಿದ್ದು ಇದರ ನಡುವೆ ಯುವ ಪ್ರತಿಭನೆ ಪೃಥ್ವಿ ಶಾ ಅಲಕ್ಷ್ಯದ ರನೌಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

ಪೃಥ್ವಿ ಶಾ ರನೌಟ್ ಗೆ ಬಲಿಯಾದ ರೀತಿಯನ್ನು ನೋಡಿ ಖ್ಯಾತ ವೀಕ್ಷಕ ವಿವರಣೆಕಾರ ಮತ್ತು ಮಾಜಿ ಟೆಸ್ಟ್ ಆಟಗಾರ ಆಕಾಶ್ ಚೋಪ್ರಾ ಅವರು ಪೃಥ್ವಿ ಶಾ ಫಿಟ್ ನೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

ಪೃಥ್ವಿ ಎರಡು ರನ್ ಅನ್ನು ಸುಲಭವಾಗಿ ಪಡೆಯಬಹುದಾಗಿತ್ತು. ಲೆಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದ್ದ ಪೃಥ್ವಿ ಎರಡು ರನ್ ಗೆ ಕರೆ ನೀಡಿದ್ದರು. ಇನ್ನು ಸುಲಭವಾಗಿ ಓಡಬಹುದಾಗಿತ್ತು. ಆದರೆ ಪೃಥ್ವಿ ಶಾ ರನೌಟ್ ಆಗಿದ್ದರು. ಇದರಿಂದಾಗಿ ಆಕಾಶ್ ಚೋಪ್ರಾ ಫಿಟ್ನೆಸ್ ಪ್ರಶ್ನೆ ಎತ್ತಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್ ಪೇರಿಸಿತ್ತು. 297 ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಇನ್ನು 17 ಎಸೆತ ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 300 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com