ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬ್ಯಾಷ್ ಲೀಗ್: ಕೇವಲ 2 ಗಂಟೆಗಳ ಅವಧಿಯಲ್ಲಿ 2 ಹ್ಯಾಟ್ರಿಕ್

ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿ ಒಂದೇ ದಿನ 2 ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಕೇವಲ 2 ಗಂಟೆಗಳ ಅವಧಿಯಲ್ಲಿ ಎರಡೆರಡು ಹ್ಯಾಟ್ರಿಕ್ ದಾಖಲೆಗಳು ಸೃಷ್ಟಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮೆಲ್ಬೋರ್ನ್‌: ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿ ಒಂದೇ ದಿನ 2 ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಕೇವಲ 2 ಗಂಟೆಗಳ ಅವಧಿಯಲ್ಲಿ ಎರಡೆರಡು ಹ್ಯಾಟ್ರಿಕ್ ದಾಖಲೆಗಳು ಸೃಷ್ಟಿಯಾಗಿದೆ.

ಹೌದು.. ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ಬುಧವಾರ ನಡೆದ 2 ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ವಿಕೆಟ್ ಸಾಧನೆ ದಾಖಲಾಗಿದೆ. ಮೊದಲಿಗೆ ಸಿಡ್ನಿ ಸಿಕ್ಸರ್ಸ್‌ ವಿರುದ್ಧದ ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌ ಪರ ಅಫ್ಘಾನಿಸ್ತಾನದ ಲೆಗ್‌ ಸ್ಪಿನ್ನರ್‌ ರಶೀದ್ ಖಾನ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಿಂಚಿದರೆ, ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನದ ಯುವ ವೇಗಿ ಹ್ಯಾರಿಸ್‌ ರೌಫ್‌ ಸಿಡ್ನಿ ಥಂಡರ್ಸ್‌ ವಿರುದ್ಧ ಅಬ್ಬರಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ಬಿಬಿಎಲ್‌ 2019-20 ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಟಿ20 ಲೀಗ್‌ಗೆ ಪದಾರ್ಪಣೆ ಮಾಡಿದ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌, ಆಡಿದ ಮೊದಲ ಮೂರು ಪಂದ್ಯಗಳಲ್ಲೇ 10 ವಿಕೆಟ್‌ ಪಡೆದು ಮಿಂಚಿದ್ದರು. ಇದೀಗ ಸಿಡ್ನಿ ಥಂಡರ್ಸ್‌ ವಿರುದ್ಧ ಬುಧವಾರದ ಪಂದ್ಯದಲ್ಲಿ ಇನ್ನೇನು ವಿಕೆಟ್‌ ಇಲ್ಲದೆ ಬರಿಗೈಲಿ ತಮ್ಮ 4 ಓವರ್‌ಗಳ ಸ್ಪೆಲ್‌ ಮುಗಿಸುವುದಿದ್ದರು. ಆದರೆ, ತಮ್ಮ ಕೊನೆಯ ಓವರ್‌ನಲ್ಲಿ ಮೂರು ಅದ್ಭುತ ಎಸೆತಗಳನ್ನು ಹಾಕಿದ ಹ್ಯಾರಿಸ್‌ ಮ್ಯಾಥ್ಯೂ ಗಿಲ್ಕೆಸ್‌, ಕ್ಯಾಲಮ್‌ ಫರ್ಗ್ಯೂಸನ್‌ ಮತ್ತು ಡೇನಿಯೆಲ್‌ ಸ್ಯಾಮ್ಸ್‌ ಅವರ ವಿಕೆಟ್‌ ಪಡೆಯುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು. 

ರಶೀದ್‌ ಖಾನ್‌ ಹ್ಯಾಟ್ರಿಕ್‌ ಸಾಧನೆ
ಇದಕ್ಕೂ ಮುನ್ನ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ರಶೀದ್‌ ಖಾನ್‌ ಕೂಡ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ಸ್ಟಾರ್‌ ಆಟಗಾರ ರಶೀದ್‌ ಖಾನ್‌, 11ನೇ ಓವರ್‌ನ ಕೊನೆ ಎರಡು ಎಸೆತಗಳಲ್ಲಿ ಸಿಕ್ಸರ್ಸ್‌ ತಂಡದ ನಾಯಕ ಜೇಮ್ಸ್‌ ವಿನ್ಸ್‌ (27 ರನ್) ಮತ್ತು ಜಾಕ್‌ ಎಡ್ವರ್ಡ್ಸ್‌ (0 ರನ್) ಅವರನ್ನು ಔಟ್‌ ಮಾಡಿ, 13ನೇ ಓವರ್‌ನ ಮೊದಲ ಎಸೆತದಲ್ಲಿ ಜಾರ್ಡನ್‌ ಸಿಲ್ಕ್‌ (16 ರನ್) ಅವರಿಗೂ ಪೆವಿಲಿಯನ್‌ ದಾರಿ ತೋರಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com