ಕೊಲಂಬೋ: ಶ್ರೀಲಂಕಾ ಸ್ಟಾರ್ ಆಟಗಾರ ಕುಸಾಲ್ ಮೆಂಡಿಸ್ ಅವರ ಕಾರು ಗುದ್ದಿದ ಪರಿಣಾಮ 64 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಕೊಲಂಬೋ ಪೋಲೀಸರು ಮೆಂಡಿಸ್ ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಜುಲೈ 5 ರ ಬೆಳಿಗ್ಗೆ ಕೊಲಂಬೊ ಉಪನಗರ ಪನದುರಾದಲ್ಲಿ ಈ ಘಟನೆ ನಡೆದಿದೆ. ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಈ ವ್ಯಕ್ತಿ ಸ್ಥಳೀಯ ನಿವಾಸಿಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದ ಕಾರಣ ಅವರು ಮೃತಪಟ್ಟಿದ್ದಾರೆ.
ಮೆಂಡಿಸ್ ಮದ್ಯಸೇವಿಸಿ ಕಾರು ಚಲಾಯಿಸುತ್ತಿದ್ದರೆ ಎನ್ನುವುದು ಇನ್ನೂ ದೃಢವಾಗಿಲ್ಲ. ಕ್ರಿಕೆಟಿಗನನ್ನು ಇಂದು ಇಲ್ಲವೇ ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ.
25 ವರ್ಷದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಶ್ರೀಲಂಕಾ ಪರ 44 ಟೆಸ್ಟ್ ಮತ್ತು 76 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕೋವಿಡ್ ಲಾಕ್ ಡೌನ್ ನಂತರ ಮೆಂಡಿಸ್ ತಮ್ಮ ಅಭ್ಯಾಸವನ್ನು ಪುನಾರಂಭಿಸಿದ್ದಾರೆ. ಶ್ರೀಲಂಕಾದಲ್ಲಿ ಆಂತರಿಕ ಲಾಕ್ ಡೌನ್ ತೆಗೆದು ಹಾಕಲಾಗಿದ್ದು ಮೆಂಡಿಸ್ ರಸ್ತೆಗಿಳಿಯಲು ಇದು ಅನುಕೂಲವಾಗಿದೆ ಎಂದು ಹೇಳಲಾಗಿದೆ.
Advertisement