ಆಗಸ್ಟ್ 2 ರಂದು ಐಪಿಎಲ್ ಆಡಳಿತಾತ್ಮಕ ಸಮಿತಿ ಸಭೆ: ಪಂದ್ಯಾವಳಿಯ ವೇಳಾಪಟ್ಟಿಗೆ ಅಂತಿಮ ರೂಪ ಸಾಧ್ಯತೆ!

ಈ ಬಾರಿ ಯುಎಇನಲ್ಲಿ ನಡೆಯಲಿರುವ ಟಿ-20 ಮಾದರಿಯ ಐಪಿಎಲ್ 2020  ಪಂದ್ಯಾವಳಿಗಳ ವೇಳಾಪಟ್ಟಿಗೆ ಅಂತಿಮ ರೂಪ, ಮತ್ತಿತರ ವ್ಯವಸ್ಥೆಗಾಗಿ ಆಗಸ್ಟ್ 2 ರಂದು ಐಪಿಎಲ್ ಆಡಳಿತಾತ್ಮಕ ಸಭೆ ನಡೆಯಲಿದೆ.
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ
Updated on

ನವದೆಹಲಿ: ಈ ಬಾರಿ ಯುಎಇನಲ್ಲಿ ನಡೆಯಲಿರುವ ಟಿ-20 ಮಾದರಿಯ ಐಪಿಎಲ್ 2020  ಪಂದ್ಯಾವಳಿಗಳ ವೇಳಾಪಟ್ಟಿಗೆ ಅಂತಿಮ ರೂಪ, ಮತ್ತಿತರ ವ್ಯವಸ್ಥೆಗಾಗಿ ಆಗಸ್ಟ್ 2 ರಂದು ಐಪಿಎಲ್ ಆಡಳಿತಾತ್ಮಕ ಸಭೆ ನಡೆಯಲಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿ ಭಾರತದಿಂದ ಹೊರಗಡೆ ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಪಂದ್ಯಾವಳಿ ನಡೆಯಲಿದೆ.ಆಗಸ್ಟ್ 2ರಂದು ಐಪಿಎಲ್ ಆಡಳಿತಾತ್ಮಕ ಸಮಿತಿ ಸಭೆ ನಡೆಯಲಿದೆ ಎಂದು ಐಪಿಎಲ್  ಅಧ್ಯಕ್ಷ  ಬ್ರಿಜೇಶ್ ಪಾಟೀಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸಭೆಯಲ್ಲಿ ಎಂಟು ಫ್ರಾಂಚೈಸಿಗಳಿಗೆ  ಪಂದ್ಯಾವಳಿಯ ವಿಧಾನಗಳ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಬಿಸಿಸಿಐನ ಮತ್ತೋರ್ವ ಹಿರಿಯ ಅಧಿಕಾರಿ ಹೇಳಿದ್ದಾರೆ. ಫ್ರಾಂಚೈಸಿಗಳಿಗೆ ಮಾರ್ಗಸೂಚಿಗಳನ್ನು ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮತ್ತೋರ್ವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಬಿಸಿಸಿಐನ ಹಿರಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು,
ವಿವಿಧ ಪಾಲುದಾರರೊಂದಿಗೆ ಮಾತನಾಡುವ ನಿರೀಕ್ಷೆಯಿದೆ.

ಸೌರವ್ ಗಂಗೂಲಿ ಮತ್ತು ಶಾ ಅವರ ಅಧಿಕಾರವಧಿ ಮುಗಿದಿದೆ ಆದರೆ, ಸುಪ್ರೀಂಕೋರ್ಟ್ ನಿಂದ ಲೋದಾ ಸಮಿತಿ ಶಿಫಾರಸ್ಸಿನಲ್ಲಿ ಸಡಿಲತೆಯನ್ನು ಬಯಸಿದ್ದಾರೆ. ಇದರ ವಿಚಾರಣೆ ಆಗಸ್ಟ್ 17 ರಂದು ನಡೆಯಲಿದೆ.

ಆಟಗಾರರ ಕುಟುಂಬದವರಿಗೆ ಅವಕಾಶ ಕಲ್ಪಿಸುವುದರ ಕುರಿತಂತೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಸ್ಯಾನಿಟೈಸ್ಡ್ ಪರಿಸರದಲ್ಲಿ ಎರಡು ತಿಂಗಳ ಕಾಲ ಕುಟುಂಬದವರಿಂದ ಆಟಗಾರರನ್ನು ದೂರ ಇಡುವುದು ಅಪರಾಧ ಎಂದು ಹಿರಿಯ ಪ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಮಾನ್ಯ ಸಂದರ್ಭಗಳಲ್ಲಿ ಆಟಗಾರರು  ಹೆಂಡತಿ ಹಾಗೂ ಗೆಳತಿಯೊಂದಿಗೆ ನಿರ್ದಿಷ್ಠ ವೇಳೆಯಲ್ಲಿ ಕಾಲ ಕಳೆಯಬಹುದಿತ್ತು.
ಆದರೆ, ಇದು ಸಂಪೂರ್ಣವಾಗಿ ವಿಭಿನ್ನವಾದ ಸನ್ನಿವೇಶವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಒಟ್ಟಾರೇ, ಈ ಎಲ್ಲಾ ವಿಚಾರಗಳ ಕುರಿತಂತೆ ಐಪಿಎಲ್ ಆಡಳಿತಾತ್ಮಕ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com