ಹಾರ್ದಿಕ್ ಪಾಂಡ್ಯ-ನತಾಶ ದಂಪತಿಗೆ ಗಂಡು ಮಗು ಜನನ

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ- ನಟಿ ನತಾಶ ದಂಪತಿಗೆ ಗಂಡು ಮಗು ಜನಿಸಿದೆ. 
ಹಾರ್ದಿಕ್ ಪಾಂಡ್ಯ-ನತಾಶ ದಂಪತಿಗೆ ಗಂಡು ಮಗು ಜನನ
Updated on: 

ನವದೆಹಲಿ: ಕ್ರಿಕೆಟರ್ ಹಾರ್ದಿಕ್ ಪಾಂಡ್ಯ- ನಟಿ ನತಾಶ ದಂಪತಿಗೆ ಗಂಡು ಮಗು ಜನಿಸಿದೆ. 

ವಡೋದರದಲ್ಲಿ ನತಾಶಗೆ ಹೆರಿಗೆಯಾಗಿದ್ದು, ಹಾರ್ದಿಕ್ ಪಾಂಡ್ಯ ಟ್ವಿಟರ್ ನಲ್ಲಿ ಮಗುವಿನ ಕೈ ಫೋಟೊ ಪೋಸ್ಟ್ ಮಾಡುವ ಮೂಲಕ ಸಿಹಿ ಸುದ್ದಿಯನ್ನು ಘೋಷಿಸಿದ್ದಾರೆ. 

ಮೇ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬಕ್ಕೆ ಮೂರನೇ ಸದಸ್ಯನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದರು.

"ನತಾಶ ಮತ್ತು ನಾನು ಅದ್ಬುತವಾಗಿ ಸಾಗಿ ಬಂದಿದ್ದೇವೆ. ಈ ಪಯಣ ಮತ್ತಷ್ಟು ಹಸನಾಗಲಿದೆ. ನಾವಿಬ್ಬರೂ ಶೀಘ್ರದಲ್ಲೇ ನಮ್ಮ ಬಾಳಲ್ಲಿ ಹೊಸ ಜೀವವೊಂದರ ಆಗಮನವನ್ನು ನಿರೀಕ್ಷಿಸುತ್ತಿದ್ದೇವೆ. ಜೀವನದ ಈ ಹಂತವನ್ನು ಆನಂದಿಸುತ್ತಿದ್ದೇವೆ. ನಿಮ್ಮೆಲ್ಲರ ಶುಭ ಹಾರೈಕೆ ನಮ್ಮೊಟ್ಟಿಗೆ ಇರಲಿ," ಎಂದು ಸರಣಿ ಫೋಟೊಗಳೊಂದಿಗೆ ಹಾರ್ದಿಕ್‌ ಪಾಂಡ್ಯ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮಾಡಿದ್ದಾರೆ. ಅಂದಹಾಗೆ ಮದುವೆಗೂ ಮೊದಲೇ ತಂದೆಯಾದ ಭಾರತ ತಂಡದ ಮೊತ್ತ ಮೊದಲ ಕ್ರಿಕೆಟರ್‌ ಹಾರ್ದಿಕ್‌ ಪಾಂಡ್ಯ

ಹಾರ್ದಿಕ್ ಪಾಂಡ್ಯಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರಥಮವಾಗಿ ಶುಭಾಶಯ ಕೋರಿದ್ದಾರೆ. 

ಜನವರಿಯಲ್ಲಿ ಬಾಲಿವುಡ್‌ ಬೆಡಗಿ ಹಾಗೂ ಕನ್ನಡದ 'ದನಾಕಾಯೋನು' ಸಿನಿಮಾದಲ್ಲಿ ನಟಿಸಿದ್ದ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್‌ಕೊವಿಚ್‌ ಅವರೊಟ್ಟಿಗೆ ಹಾರ್ದಿಕ್ ಪಾಂಡ್ಯ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com