ನಾನು ಸತ್ತಿಲ್ಲ, ಬದುಕಿದ್ದೇನೆ: ಸಾಮಾಜಿಕ ಜಾಲತಾಣದಲ್ಲಿ ಪಾಕ್ ಕ್ರಿಕೆಟಿಗನ ಅಳಲು

ನಾನು ಸತ್ತಿಲ್ಲ.. ಬದುಕಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟ್ ಆಟಗಾರ ಮಹಮದ್ ಇರ್ಫಾನ್ ಹೇಳಿದ್ದಾರೆ.
ಪಾಕ್ ಕ್ರಿಕೆಟಿಗ ಮಹಮದ್ ಇರ್ಫಾನ್
ಪಾಕ್ ಕ್ರಿಕೆಟಿಗ ಮಹಮದ್ ಇರ್ಫಾನ್

ಲಾಹೋರ್: ನಾನು ಸತ್ತಿಲ್ಲ.. ಬದುಕಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟ್ ಆಟಗಾರ ಮಹಮದ್ ಇರ್ಫಾನ್ ಹೇಳಿದ್ದಾರೆ.

ತಮ್ಮ ಸಾವಿನ ಸುದ್ದಿಗಳ ಕುರಿತಂತೆ ಮೌನ ಮುರಿದಿರುವ ಮಹಮದ್ ಇರ್ಫಾನ್, ಈ ಸುದ್ದಿಗಳಲ್ಲಿ ಹುರುಳಿಲ್ಲ. ಇವು ಸುಳ್ಳು ಸುದ್ದಿಯಾಗಿದ್ದು, ನಾನು ಸತ್ತಿಲ್ಲ.. ಬದುಕಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಲವು ಸಾಮಾಜಿಕ ಮಾಧ್ಯಮಗಳು ಕಾರು ಅಪಘಾತದಲ್ಲಿ ನನ್ನ ಸಾವಿನ ಬಗ್ಗೆ ಆಧಾರ ರಹಿತ ನಕಲಿ ಸುದ್ದಿಗಳನ್ನು ಹರಡುತ್ತಿವೆ. ಇದು ನನ್ನ ಕುಟುಂಬ ಮತ್ತು ಸ್ನೇಹಿತರನ್ನುಸಂಕಷ್ಟಕ್ಕೀಡು ಮಾಡಿದೆ ಮತ್ತು ಈ ಕುರಿತಂತೆ ನನಗೆ ಮತ್ತು ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಸತತವಾಗಿ ಕರೆಗಳು ಬರುತ್ತಿವೆ. ದಯವಿಟ್ಟು ಅಂತಹ ವಿಷಯಗಳಿಂದ ದೂರವಿರಿ. ಯಾವುದೇ ಅಪಘಾತ ಸಂಭವಿಸಿಲ್ಲ ಮತ್ತು ನಾವು ಚೆನ್ನಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

38 ವರ್ಷ ವಯಸ್ಸಿನ ಮಹಮದ್ ಇರ್ಫಾನ್ ಪಾಕ್ ಪರ 4 ಟೆಸ್ಚ್, 60 ಏಕದಿನ ಮತ್ತು 22 ಟಿ20 ಪಂದ್ಯಗಳನ್ನಾಡಿದ್ದಾರೆ, ಕಳೆದ ನವೆಂಬರ್ ನಲ್ಲಿ ಆಸಿಸ್ ವಿರುದ್ಧದ ಟಿ20 ಸರಣಿಯಲ್ಲಿ ಕೊನೆಯ ಬಾರಿಗೆ ಮಹಮದ್ ಇರ್ಫಾನ್ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. 

ನಿನ್ನೆಯಷ್ಚೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಮಹಮದ್ ಇರ್ಫಾನ್ ಸಾವಿನ ಕುರಿತು ಟ್ವೀಟ್ ಮಾಜಿ ಪೇಚಿಗೆ ಸಿಲುಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇರ್ಫಾನ್ ಹೊಟ್ಟೆನೋವು ಮತ್ತು ಸೋಂಕಿನಿಂದ ಸಾವನ್ನಪ್ಪಿದ್ದರು ಎಂದು ಸುದ್ದಿ ಹಬ್ಬಿಸಲಾಗಿತ್ತು. ಇದೀಗ ಸ್ವತಃ ಕ್ರಿಕೆಟಿಗ ಇರ್ಫಾನ್ ತಾವು ಬದುಕಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com