ಕ್ರೈಸ್ಟ್‌ಚರ್ಚ್: ಇಲ್ಲಿನ ಹ್ಯಾಗ್ಲೆ ಓವಲ್ ಅಂಗಳದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ತಂಡ 235 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಇಂದಿನ ದಿನದಾಟದಲ್ಲಿ ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಹಿಡಿದ ಕ್ಯಾಚ್ ಅತ್ಯಂತ ಆಕರ್ಷಣೆಯಿಂದ ಕೂಡಿತ್ತು.
ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ 142 ರನ್‌ಗಳಿಗೆ 142 ರನ್ ಗಳಿಸಿತ್ತು. ನಂತರ, ಕೈಲ್ ಜಾಮಿಸನ್(49) ಹಾಗೂ ನೀಲ್ ವ್ಯಾಗ್ನರ್ (21) ಅವರು ಒಂಬತ್ತನೇ ವಿಕೆಟ್‌ಗೆ 51 ರನ್ ಜತೆಯಾಟವಾಡಿದ್ದರು. ಈ ವೇಳೆ ನೀಲ್ ವ್ಯಾಗ್ನರ್ ಅವರು ಸ್ಕೈರ್ ಲೆಗ್ ಕಡೆ ಹೊಡೆದ ಚೆಂಡನ್ನು ರವೀಂದ್ರ ಜಡೇಜಾ ಅವರು ಜಂಪ್ ಮಾಡುವ ಮೂಲಕ ಕ್ಯಾಚ್ ಹಿಡಿದರು.
ಅತ್ಯಂತ ಕಠಿಣ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಅವರನ್ನು ಸಹ ಆಟಗಾರರ ಸುತ್ತುವರಿದು ಅಭಿನಂದನೆ ಸಲ್ಲಿಸಿದರು. ಟೀ ವಿರಾಮದ ವೇಳೆ ಮಾತನಾಡಿದ ಜಡೇಜಾ," ಲೆಗ್ ಸೈಡ್ ಕಡೆ ಹೆಚ್ಚು ರನ್ ಗಳಿಸುತ್ತಿದ್ದ ವ್ಯಾಗ್ನರ್ ಅವರಿಂದ ಹೊಡೆದಂತಹ ಫುಲ್ ಅಪ್ ಶಾಟ್ನಿಂದ ಚಿಮ್ಮಿದ ಚೆಂಡ್ ಸ್ಕ್ವೇರ್ಲೆಗ್ ವಿಭಾಗದಲ್ಲಿ ನಿಂತಿದ್ದ ಜಡೇಜಾ ಅವರ ಮೇಲೆ ಹಾರಿ ಹೋಗುತ್ತಿತ್ತು, ಈ ವೇಳೆ ಹಿಮ್ಮುಖವಾಗಿ ಓಡಿ ಹೋಗಿ ಗಾಳಿಯಲ್ಲಿ ಹಾರಿ ಎಡಗೈನಲ್ಲಿ ಮನೋಹರವಾಗಿ ಕ್ಯಾಚ್ ಜಡೇಜಾ ಕ್ಯಾಚ್ ಹಿಡಿದರು. ಈ ಮೂಲಕ 9ನೇ ವಿಕೆಟ್‌ಗೆ ಉತ್ತಮ ಜತೆಯಾಟವಾಡುತ್ತಿದ್ದ ಕೈಲಿ ಜೇಮಿಸನ್ ಮತ್ತು ನೈಲ್ ವ್ಯಾಗ್ನರ್ ಜೋಡಿಗೆ ತಡೆವೊಡ್ಡುವ ಮೂಲಕ ಕಿವೀಸ್ ಪಡೆಗೆ ಜಡೇಜಾ ಶಾಕ್ ನೀಡಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಜಡೇಜಾ ಅವರ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದು ವರ್ಷದ ಅತ್ಯುತ್ತಮ ಕ್ಯಾಚ್ ಎಂತಲೂ ಬಣ್ಣಿಸಿದ್ದಾರೆ.
Advertisement