ವೀಡಿಯೋ: ಐಪಿಎಲ್ ಅಭ್ಯಾಸಕ್ಕಾಗಿ ಚೆನ್ನೈಗೆ ಆಗಮಿಸಿದ ಧೋನಿಗೆ ವೀರೋಚಿತ ಸ್ವಾಗತ

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ತಯಾರಿ ನಡೆಸಲು ಚೆನ್ನೈಗೆ ಆಗಮಿಸಿದ ಟೀಂ ಇಂಡಿಯಾ ಮಾಜಿ ನಾಯಕ, ಬ್ಯಾಟ್ಸ್‌ಮನ್ ಎಂ.ಎಸ್. ಧೋನಿಗೆ ತಮಿಳುನಾಡಿನ ರಾಜಧಾನಿಯಲ್ಲಿ ವೀರೋಚಿತ ಸ್ವಾಗತ ದೊರಕಿದೆ. 
ಐಪಿಎಲ್ ಅಭ್ಯಾಸಕ್ಕಾಗಿ ಚೆನ್ನೈಗೆ ಆಗಮಿಸಿದ ಧೋನಿಗೆ ವೀರೋಚಿತ ಸ್ವಾಗತ
ಐಪಿಎಲ್ ಅಭ್ಯಾಸಕ್ಕಾಗಿ ಚೆನ್ನೈಗೆ ಆಗಮಿಸಿದ ಧೋನಿಗೆ ವೀರೋಚಿತ ಸ್ವಾಗತ
Updated on

ಚೆನ್ನೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ತಯಾರಿ ನಡೆಸಲು ಚೆನ್ನೈಗೆ ಆಗಮಿಸಿದ ಟೀಂ ಇಂಡಿಯಾ ಮಾಜಿ ನಾಯಕ, ಬ್ಯಾಟ್ಸ್‌ಮನ್ ಎಂ.ಎಸ್. ಧೋನಿಗೆ ತಮಿಳುನಾಡಿನ ರಾಜಧಾನಿಯಲ್ಲಿ ವೀರೋಚಿತ ಸ್ವಾಗತ ದೊರಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿರುವ ಧೋನಿಚೆನ್ನೈಗೆ ಆಗಮಿಸಿದ್ದು ಅವರ ಸ್ವಾಗತ ವೀಡಿಯೋವನ್ನು ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.ಅಲ್ಲದೆ "Every goose shall bump with First Day First Show feels! Just #StartTheWhistles! #HomeSweetDen". ಎಂದು ಬರೆದುಕೊಂಡಿದೆ.

ಮಾರ್ಚ್ 3-4 ರಿಂದ ಧೋನಿ ಐಪಿಎಲ್ ಮುಂಬರುವ ಆವೃತ್ತಿಯ ಅಭ್ಯಾಸವನ್ನು ಪ್ರಾರಂಭಿಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಕಳೆದ ವಾರ ಖಚಿತಪಡಿಸಿದ್ದರು. ಇನ್ನು ಸಿಎಸ್‌ಕೆ ತರಬೇತಿ ಶಿಬಿರ ಮಾರ್ಚ್ 19 ರ ನಂತರವೇ ಪ್ರಾರಂಭವಾಗಲಿದೆ ಎಂದು ಸಿಇಒ ಹೇಳಿದರು.

ಮಾರ್ಚ್ 29 ರಿಂದ ಈ ಸಾಲಿನ ಐಪಿಎಲ್ ಪ್ರಾರಂಬವಾಗುತ್ತಿದ್ದು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಮೂವತ್ತೆಂಟು ವರ್ಷದ ಧೋನಿ ಪ್ರಸ್ತುತ ಆಟದಿಂದ ಸ್ವಲ್ಪ ವಿಶ್ರಾಂತಿ ಪಡೆದಿದ್ದು ಅವರು ಕೊನೆಯ ಬಾರಿಗೆ 2019 ರ ವಿಶ್ವಕಪ್‌ನಲ್ಲಿ ಕ್ರಿಕೆಟ್ ಬ್ಯಾಟ್ ಬೀಸಿದ್ದರು ಆದರೆ ನಿಧಾನಗತಿ ಬ್ಯಾಟಿಂಗ್ ಶೈಲಿಯಿಂದ ಅವರು ಟೀಕೆಗೆ ಗುರಿಯಾಗಿದ್ದರು. ವಿಶೇಷವಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ (ಸೆಮಿಫೈನಲ್), ಅವರು ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿದ್ದರು.

ಈ ವರ್ಷದ ಆರಂಭದಲ್ಲಿ, ಬಿಸಿಸಿಐನ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಧೋನಿ ಸ್ಥಾನ ಪಡೆದಿರಲಿಲ್ಲ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com