ಕನ್ನಡಿಗ ಸುನೀಲ್ ಜೋಶಿ ಬಿಸಿಸಿಐ ಆಯ್ಕೆ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಕನ್ನಡಿಗ ಸುನೀಲ್ ಜೋಶಿ ಅವರು ಆಯ್ಕೆಯಾಗಿದ್ದಾರೆ. 
ಕುಂಬ್ಳೆ-ಜೋಶಿ
ಕುಂಬ್ಳೆ-ಜೋಶಿ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಕನ್ನಡಿಗ ಸುನೀಲ್ ಜೋಶಿ ಅವರು ಆಯ್ಕೆಯಾಗಿದ್ದಾರೆ.

ಮದನ್ ಲಾಲ್, ರುದ್ರ ಪ್ರತಾಪ್ ಮತ್ತು ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸುನೀಲ್ ಜೋಶಿ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದೆ. 

ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಎಂಎಸ್ ಕೆ ಪ್ರಸಾದ್ ಜಾಗಕ್ಕೆ ಇದೀಗ ಸುನೀಲ್ ಜೋಶಿ ಬಂದಿದ್ದಾರೆ. ಇನ್ನುಂದೆ ಆಟಗಾರರ ಆಯ್ಕೆ ಹೊಣೆಗಾರಿಕೆ ಜೋಶಿ ಮೇಲಿದೆ. ಆಯ್ಕೆ ಸಮಿತಿಯಲ್ಲಿ ಹರ್ವೀಂದರ್ ಸಿಂಗ್, ದೇವಾಂಗ್ ಗಾಂಧಿ, ಸರಣ್ ದೀಪ್ ಸಿಂಗ್ ಮತ್ತು ಜತಿನ್ ಪರಾನಜ್ಪೆ ಇರಲಿದ್ದಾದರೆ.

ಆಯ್ಕೆ ಸಮಿತಿ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳಿಗೆ ಬುಧವಾರ ಅಂತಿಮ ಸಂದರ್ಶನ ನಡೆಸಲಾಯಿತು. ವೆಂಕಟೇಶ್ ಪ್ರಸಾದ್ ಅವರ ತೀವ್ರ ಪೈಪೋಟಿಯಿಂದಾಗಿ. ಸಲಹಾ  ಸಮಿತಿ ಸುನಿಲ್ ಜೋಷಿ ಪರವಾಗಿ ಒಲವು ತೋರಿದ ಕಾರಣ ಜೋಷಿ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನಕ್ಕೆ ಶಿಫಾರಸ್ಸು ಮಾಡಿತ್ತು.

ಸ್ವದೇಶದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಗೆ ಹೊಸ ಅಧ್ಯಕ್ಷರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಸದಸ್ಯರನ್ನು ಆಯ್ಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com