ಇತಿಹಾಸದ ಕನಸಿನಲ್ಲಿ ಹರ್ಮನ್ ಪ್ರೀತ್, ವಿಶಿಷ್ಠ ದಾಖಲೆಯ ಸನಿಹದಲ್ಲಿ ಟೀಂ ಇಂಡಿಯಾ ನಾಯಕಿ!

ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ತಲುಪುವ ಮೂಲಕ ಈಗಾಗಲೇ ಇತಿಹಾಸ ನಿರ್ಮಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು, ಇತಿಹಾಸವನ್ನು ಸೃಷ್ಟಿಸುವ ವಿಶ್ವಾಸ ಹೊಂದಿದೆ.
ಹರ್ಮನ್ ಪ್ರೀತ್ ಕೌರ್
ಹರ್ಮನ್ ಪ್ರೀತ್ ಕೌರ್

ನವದೆಹಲಿ: ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ತಲುಪುವ ಮೂಲಕ ಈಗಾಗಲೇ ಇತಿಹಾಸ ನಿರ್ಮಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು, ಇತಿಹಾಸವನ್ನು ಸೃಷ್ಟಿಸುವ ವಿಶ್ವಾಸ ಹೊಂದಿದೆ.
  
ಭಾನುವಾರವೂ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದ್ದು, ಭಾರತ ತಂಡವು ಈ ದಿನವನ್ನು ಪ್ರಶಸ್ತಿ ಗೆಲುವಿನೊಂದಿಗೆ ಆಚರಿಸಲು ಬಯಸುತ್ತದೆ. ಅದೇ ರೀತಿ ವಿಶ್ವದ ನಂಬರ್ ಒನ್ ತಂಡ, ಹಾಲಿ ಚಾಂಪಿಯನ್ ಮತ್ತು ಆತಿಥೇಯ ಆಸ್ಟ್ರೇಲಿಯಾ ತಮ್ಮ ಪ್ರಶಸ್ತಿಯನ್ನು ಪ್ರೇಕ್ಷಕರ ಸಮ್ಮುಖದಲ್ಲಿ ಉಳಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಆಸೀಸ್ ತಂಡವನ್ನು ಮಣಿಸಿತ್ತು. 
  
ಮೊದಲ ಸೆಮಿಫೈನಲ್ಸ್ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಟೀಮ್ ಇಂಡಿಯಾ ಲೀಗ್ ಹಂತದ ಅಂಕಗಳ ಆಧಾರದ ಮೇಲೆ ಫೈನಲ್ ಪ್ರವೇಶಿಸಿತ್ತು. ಆಸ್ಟ್ರೇಲಿಯಾವು ಡಕ್ವರ್ತ್-ಲೂಯಿಸ್ ವಿರುದ್ಧ ದಕ್ಷಿಣ ಆಫ್ರಿಕಾವನ್ನು ಐದು ರನ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಫೈನಲ್‌ನಲ್ಲಿ ಮಳೆಯಾಗುವ ಅಪಾಯವಿಲ್ಲ ಆದರೆ ಮಳೆ ಬಂದರೆ ಫೈನಲ್‌ಗಾಗಿ ಮೀಸಲು ದಿನವನ್ನು ಇಡಲಾಗುತ್ತದೆ. ಮೀಸಲು ದಿನದಂದು ಆಟವನ್ನು ಸಂಪೂರ್ಣವಾಗಿ ತೊಳೆದರೆ, ನಂತರ ಉಭಯ ತಂಡಗಳನ್ನು ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ.
  
ಟಿಕೆಟ್ ಬೇಡಿಕೆಯನ್ನು ಪೂರೈಸಲು ಐಸಿಸಿ ಹೆಚ್ಚುವರಿ ಟಿಕೆಟ್ ನೀಡಿದೆ. ಮೆಲ್ಬೋರ್ನ್ ಮೈದಾನವು ಈ ಹಿಂದೆ 1988 ರಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ನಡೆಸಿತ್ತು, ಆಸ್ಟ್ರೇಲಿಯಾವು ಇಂಗ್ಲೆಂಡ್‌ನ್ನು 3000 ಪ್ರೇಕ್ಷಕರ ಎದುರು ಸೋಲಿಸುವ ಮೂಲಕ ಗೆದ್ದು ಬೀಗಿತ್ತು. ಆದರೆ ಈ ಬಾರಿ ಫೈನಲ್‌ನಲ್ಲಿ ಸುಮಾರು ಒಂದು ಲಕ್ಷ ವೀಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ.
  
ಫೈನಲ್ ಮುನ್ನಾದಿನದಂದು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, "ನಾವು 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಫೈನಲ್ ಪಂದ್ಯವನ್ನು ಆಡಲಿದ್ದು, ರೋಮಾಂಚನವಾಗಿದೆ. ಇದು ನಮಗೆ ಒಂದು ದೊಡ್ಡ ಕ್ಷಣವಾಗಿದೆ ಆದರೆ ಈ ಭಾವನೆ ನಮ್ಮ ಮೇಲೆ ಪ್ರಾಬಲ್ಯ ಪರಿಣಾಮ ಬೀರದು. ನಮ್ಮ ತಂಡ ಆಟದತ್ತ ಗಮನ ಹರಿಸಿ ಉತ್ತಮ ಪ್ರದರ್ಶನ ನೀಡುವ ಕನಸು ನಮ್ಮದಾಗಿದೆ” ಎಂದಿದ್ದಾರೆ. 
  
ಹರ್ಮನ್ ಪ್ರೀತ್ ಕೌರ್ ಅವರಿಗೆ ಫೈನಲ್ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುವ ಅವಕಾಶವಿದೆ. ಅಲ್ಲದೆ ಕಪ್ ಗೆ ಟೀಮ್ ಇಂಡಿಯಾ ಮುತ್ತಿಟ್ಟಲ್ಲಿ ಹರ್ಮನ್ ಪ್ರೀತ್ ಸಹ, ವಿಶ್ವಕಪ್ ಎತ್ತಿದ ಭಾರತ ಮೂರನೇ ನಾಯಕ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್ ಅವರು ಸಹ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದರು. 1983ರಲ್ಲಿ ಕಪಿಲ್ ವಿಂಡೀಸ್ ತಂಡವನ್ನು ಮಣಿಸಿ, ಆಂಗ್ಲರ ನಾಡಿನಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದರು.
  
2007 ರಲ್ಲಿ ನಡೆದ ಮೊದಲ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಧೋನಿ ನಾಯಕತ್ವದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಧೋನಿ ನಾಯಕತ್ವದಲ್ಲಿಯೇ ಭಾರತವು 28 ವರ್ಷಗಳ ಸುದೀರ್ಘ ವರ್ಷದ ನಂತರ 2011 ರಲ್ಲಿ ಶ್ರೀಲಂಕಾವನ್ನು ಸೋಲಿಸಿ ಏಕದಿನ ವಿಶ್ವಕಪ್ ಗೆದ್ದಿತು.
  
2005 ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವನ್ನು ಆಸ್ಟ್ರೇಲಿಯಾ 98 ರನ್‌ಗಳಿಂದ ಸೋಲಿಸಿತ್ತು. ಆ ಸಮಯದಲ್ಲಿ ಭಾರತದ ನಾಯಕಿ ಮಿಥಾಲಿ ರಾಜ್ ಇದ್ದರು. ಮಿಥಾಲಿ ನಾಯಕತ್ವದಲ್ಲಿ, ಭಾರತ ತಂಡವು 2017 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ಗೆ ತಲುಪಿತ್ತು. ಪ್ರಶಸ್ತಿ ಸುತ್ತಿನಲ್ಲಿ ಮಿಥಾಲಿ ಪಡೆ ಇಂಗ್ಲೆಂಡ್ ವಿರುದ್ಧ ಆಘಾತ ಕಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com