ಕ್ರಿಕೆಟಿಗೂ ತಟ್ಟಿದ ಕೊರೋನಾ ಭೀತಿ! ಐಪಿಎಲ್ ಮುಂದೂಡಿಕೆ ಸೂಚನೆ ಕೊಟ್ಟ ಮಹಾರಾಷ್ಟ್ರ ಆರೋಗ್ಯ ಸಚಿವ 

ದೇಶಾದ್ಯಂತ ಆತಂಕ ಹುಟ್ಟಿಸಿರುವ ಕೊರೋನಾವೈರಸ್ ಹಿನ್ನೆಲೆಯಲ್ಲಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ಮುಂದೂಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾಗ್ಪುರ(ಮಹಾರಾಷ್ಟ್ರ): ದೇಶಾದ್ಯಂತ ಆತಂಕ ಹುಟ್ಟಿಸಿರುವ ಕೊರೋನಾವೈರಸ್ ಹಿನ್ನೆಲೆಯಲ್ಲಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ಮುಂದೂಡಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ.

"ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೇ ಸ್ಥಳದಲ್ಲಿ ಒಟ್ಟುಗೂಡಿದಾಗ (ಸಾಂಕ್ರಾಮಿಕ ಕಾಯಿಲೆಗಳು) ಹರಡುವ ಅಪಾಯ ಯಾವಾಗಲೂ ಇರುತ್ತದೆ ಹಾಗಾಗಿ ಇಂತಹ (ಐಪಿಎಲ್) ಕಾರ್ಯಕ್ರಮಗಳನ್ನು ಭವಿಷ್ಯದಲ್ಲಿ  ಆಯೋಜಿಸಬಹುದು" ಎಂದು ಟೋಪೆ ಮಾಧ್ಯಮಗಳಿಗೆ ತಿಳಿಸಿದರು.

ಐಪಿಎಲ್ ಅನ್ನು ಮುಂದೂಡಬೇಕೆ ಎಂಬ ಬಗ್ಗೆ ಅಧಿಕೃತ ವಲಯಗಳಲ್ಲಿ ಪ್ರಸ್ತುತ ಚರ್ಚೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ನಿರ್ಧಾರಹೊರಬೀಳಲಿದೆ ಎಂದು ಅವರು ಹೇಳಿದರು ಟೈಮ್ ಟೇಬಲ್ ನಲ್ಲಿ ನಾಲ್ಕು ಡಜನ್‌ಗೂ ಹೆಚ್ಚು ಪಂದ್ಯಗಳನ್ನು ಹೊಂದಿರುವ ಬಹುನಿರೀಕ್ಷಿತ ಐಪಿಎಲ್ -13 ಮಾರ್ಚ್ 29ಕ್ಕೆ ಭರ್ಜರಿಯಾಗಿ ಪ್ರಾರಂಭಗೊಳ್ಳಬೇಕಿತ್ತು.ಮತ್ತು ಮೇ 24 ರವರೆಗೆ ದೇಶದ ವಿವಿಧ ಸ್ಥಳಗಳಲ್ಲಿ ನಡೆಯಬೇಕಿದೆ.

ಐಪಿಎಲ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಪಾದಿಸಿದ ಕೆಲವೇ ದಿನಗಳ ನಂತರ, ಟೊಪೆ ಹೇಳಿಕೆ ಮಾಧ್ಯಮದಲ್ಲಿ ವೈರಲ್ ಆಗಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com