
ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್, ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದು, ಎರಡು ದಶಕಗಳಿಂದಲೂ ಮಂಕಾಗಿದ್ದ ವೃತ್ತಿ ಜೀವನಕ್ಕೆ ಅಂತಿಮ ತೆರೆ ಎಳೆದಿದ್ದಾರೆ
42 ವರ್ಷದ ಜಾಫರ್ 31 ಟೆಸ್ಟ್ ಪಂದ್ಯಗಳನ್ನಾಡಿದ್ದು, 34. 11ರ ಸರಾಸರಿಯಲ್ಲಿ 1, 944 ರನ್ ಗಳನ್ನು ಕಲೆ ಹಾಕಿದ್ದಾರೆ. ಧೀರ್ಘಾವಧಿಯ ಪಂದ್ಯದಲ್ಲಿ ಐದು ಶತಕ ಹಾಗೂ 11 ಅರ್ಧ ಶತಕ ಗಳಿಸಿರುವ ವಾಸಿಂ ಜಾಫರ್, ಒಮ್ಮೆ 212 ಅತ್ಯಧಿಕ ರನ್ ಭಾರಿಸಿದ್ದರು.
ಸುಂದರ ಪಂದ್ಯಗಳನ್ನಾಡಲು ಅವಕಾಶ ದೊರೆತಿದ್ದಕ್ಕಾಗಿ ಅಲ್ಲಾಹು, ತಂದೆ ತಾಯಿ ಹಾಗೂ ಸಹೋದರರು, ಪತ್ನಿಗೆ ಧನ್ಯವಾದ ಆರ್ಪಿಸುವುದಾಗಿ ಅವರು ಹೇಳಿದ್ದಾರೆ.
ಶಾಲಾ ದಿನಗಳಲ್ಲಿದ್ದ ತಮ್ಮ ಪ್ರತಿಭೆ ಹೊರಬರಲು ನೆರವಾದ ಎಲ್ಲಾ ಕೋಚ್ ಗಳು ಹಾಗೂ ನನ್ನಲ್ಲಿ ನಂಬಿಕೆ ಇಟ್ಟು ಪಂದ್ಯಗಳನ್ನಾಡಲು ಅವಕಾಶ ನೀಡಿದ ಎಲ್ಲಾ ಆಯ್ಕೆದಾರರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ರಣಜಿ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ವಾಸಿಂ ಜಾಫರ್ ಹೇಳಿದ್ದಾರೆ.
ದ್ವಿಶತಕ ಗಳಿಸಿರುವ ಟೀಂ ಇಂಡಿಯಾ ಕೆಲ ಆಟಗಾರರಲ್ಲಿ ವಾಸಿಂ ಜಾಫರ್ ಕೂಡಾ ಒಬ್ಬರಾಗಿದ್ದಾರೆ. ಸೆಂಟ್ ಲೂಸಿಯಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 212 ರನ್ ಗಳಿಸಿದ್ದರು.
2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳ ಮೂಲಕ ಮೊದಲ ಬಾರಿಗೆ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ್ದ ವಾಸಿಂ ಜಾಫರ್, ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಣಜಿ ಟ್ರೋಫಿಯಲ್ಲಿ 12 ಸಾವಿರ ರನ್ ಹೊಂದಿರುವ ಮೊದಲ ಬ್ಯಾಟ್ಸ್ ಮನ್ ಆಗಿದ್ದಾರೆ. ಅಲ್ಲದೇ 150 ರಣಜಿ ಟ್ರೋಫಿಯ ಪಂದ್ಯಗಳನ್ನಾಡಿರುವ ಮೊದಲ ಆಟಗಾರರಾಗಿದ್ದಾರೆ.
1996-97ರಲ್ಲಿ ಚೊಚ್ಚಲ ಬಾರಿಗೆ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ವಾಸಿಂ ಜಾಫರ್, 260 ಪಂದ್ಯಗಳಿಂದ 19, 410 ರನ್ ಗಳನ್ನು ಕಲೆ ಹಾಕಿದ್ದಾರೆ.
Advertisement