ಯಾರಾದರೂ 'ಬಾವಲಿ, ನಾಯಿಗಳನ್ನು ತಿನ್ನುತ್ತಾರಾ': ಚೀನಾ ವಿರುದ್ಧ ಶೊಯೇಬ್‌ ಅಖ್ತರ್ ಆಕ್ರೋಶ

ಮಹಾಮಾರಿ ಕೊರೋನಾ ವೈರಸ್ ಜಗತ್ತಿನಾದ್ಯಂತ 5,400ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು, ಇದಕ್ಕೆ ಚೀನಾವೇ ಕಾರಣ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೊಯೇಬ್ ಅಖ್ತರ್
ಶೊಯೇಬ್ ಅಖ್ತರ್

ಲಾಹೋರ್: ಮಹಾಮಾರಿ ಕೊರೋನಾ ವೈರಸ್ ಜಗತ್ತಿನಾದ್ಯಂತ 5,400ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು, ಇದಕ್ಕೆ ಚೀನಾವೇ ಕಾರಣ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ ಗೆ ಚೀನಾವೇ ಕಾರಣ ಎಂದಿರುವ ಅಖ್ತರ್, "ಬಾವಲಿಗಳನ್ನು ತಿಂದು ಅದರ ರಕ್ತ ಮತ್ತು ಮೂತ್ರವನ್ನು ಕುಡಿದು ವೈರಸ್‌ಗಳನ್ನು ಯಾಕೆ ಹರಡುತ್ತೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನು ಇಲ್ಲಿ ಮಾತನಾಡುತ್ತಿರುವುದು ಚೀನಾದವರ ಬಗ್ಗೆ. ಇಡೀ ಜಗತ್ತನ್ನೇ ಅವರು ಅಪಾಯಕ್ಕೆ ನೂಕಿದ್ದಾರೆ. ನೀವು ಬಾವಲಿಗಳು, ನಾಯಿಗಳು ಮತ್ತು ಬೆಕ್ಕುಗಳನ್ನು ಯಾಕೆ ತಿನ್ನುತ್ತೀರಿ ಎಂಬುದೇ ಅರ್ಥವಾಗುತ್ತಿಲ್ಲ. ನನಗೆ ಇನ್ನಿಲ್ಲದ ಕೋಪ ಬರುತ್ತಿದೆ," ಎಂದು ತಮ್ಮ ಯೂಟ್ಯೂಬ್‌ ಚಾನಲ್‌ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

"ಇಡೀ ವಿಶ್ವವೇ ಈಗ ಅಪಾಯದಲ್ಲಿದೆ. ಪ್ರವಾಸೋದ್ಯಮಕ್ಕೆ ಭಾರಿ ನಷ್ಟವಾಗುತ್ತಿದೆ. ಆರ್ಥಿಕತೆಗೂ ಭಾರಿ ಹೊಡೆತ ಬಿದ್ದಿದೆ. ಪ್ರಪಂಚವೇ ಸ್ಥಬ್ಧವಾಗುವ ಸ್ಥಿತಿ ನಿರ್ಮಾಣವಾಗಿದೆ," ಎಂದು ಅಖ್ತರ್ ಚೀನಾ ವಿರುದ್ಧ ಗುಡುಗಿದ್ದಾರೆ.

"ಚೀನಾದ ಜನತೆ ವಿರುದ್ಧ ನನ್ನದೇನೂ ತಕರಾರಿಲ್ಲ. ಆದರೆ ಅವರು ಪ್ರಾಣಿಗಳೊಂದಿಗೆ ನಡೆದುಕೊಳ್ಳುವ ರೀತಿ ಸರಿಯಲ್ಲ. ಇದು ನಿಮ್ಮ ಸಂಪ್ರದಾಯ ಇರಬಹುದು. ಆದರೆ ಇದರಿಂದ ನಿಮಗೂ ಏನೂ ಪ್ರಯೋಜನವಾಗುವುದಿಲ್ಲ. ಮನುಷ್ಯತ್ವವನ್ನೇ ಇದು ಕೊಲ್ಲುತ್ತಿದೆ. ಚೀನಾದ ಜನರನ್ನು ಬಹಿಷ್ಕರಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ ಕೆಲ ನೀತಿ ನಿಯಮ ಇರಬೇಕು. ಏನೆಂದರೆ ಏನನ್ನೂ ತಿನ್ನುವುದು ಸರಿಯಲ್ಲ," ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com