ಕೆವಿನ್‌ ಪೀಟರ್ಸನ್‌ ಹಿಂದಿ ಪ್ರೇಮ!

ಇಂಗ್ಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ಗೆ ಭಾರತ ಹಾಗೂ ಹಿಂದಿ ಭಾಷೆಯ ಮೇಲೆ ಅಪಾರ ಪ್ರೇಮವಿದೆ. 
ಕೆವಿನ್‌ ಪೀಟರ್ಸನ್‌ ಹಿಂದಿ ಪ್ರೇಮ!
ಕೆವಿನ್‌ ಪೀಟರ್ಸನ್‌ ಹಿಂದಿ ಪ್ರೇಮ!
Updated on: 

ನವದಹೆಲಿ: ಇಂಗ್ಲೆಂಡ್‌ ತಂಡದ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ಗೆ ಭಾರತ ಹಾಗೂ ಹಿಂದಿ ಭಾಷೆಯ ಮೇಲೆ ಅಪಾರ ಪ್ರೇಮವಿದೆ. 

ಭಾರತಕ್ಕೆ ಆಗಾಗ ಭೇಟಿ ನೀಡುವ ಅವರು ಇಲ್ಲಿನ ಪ್ರೇಕ್ಷಣಿಯ ಸ್ಥಳಗಳಲ್ಲಿ ಸುತ್ತಾಡುತ್ತಾರೆ. ಇಂತಿಪ್ಪ ಆಟಗಾರ ಕೊರೊನಾ ವೈರಸ್ ಬಗೆಗಿನ ಜಾಗೃತಿಗಾಗಿ ಹಿಂದಿಯಲ್ಲೇ ಟ್ವೀಟ್‌ ಮಾಡಿ ಭಾರತೀಯರ ಮನಗೆದ್ದಿದ್ದಾರೆ.

ನಮಸ್ತೇ ಇಂಡಿಯಾ…ಕೊರೊನಾ ವೈರಸ್‌ ಅನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಜತೆಯಾಗಿ ಹೋರಾಡೋಣ. ನಾವು ಕೆಲವು ದಿನಗಳ ಕಾಲ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಸರಕಾರದ ನಿರ್ದೇಶನಗಳನ್ನು ಪಾಲಿಸೋಣ. ನಾವೆಲ್ಲರೂ ಬುದ್ಧಿವಂತಿಕೆ ಪ್ರದರ್ಶಿಸಬೇಕಾದ ಸಮಯವಿದು,’’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಕೊನೆಯಲ್ಲಿ ಅವರು ತಮಗೆ ಹಿಂದಿ ಕಲಿಸಿದ ಬಂಗಾಳ ತಂಡದ ಆಟಗಾರ ಶ್ರೀವತ್ಸ್‌ ಗೋಸ್ವಾಮಿ ಅವರನ್ನು ಸ್ಮರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com